×
Ad

ಬಿಳಿನೆಲೆ: ಸೊಂಟ ನೋವಿನಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ

Update: 2019-08-31 14:31 IST

ಕಡಬ, ಆ.31: ಸೊಂಟ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಳಿನೆಲೆಯಲ್ಲಿ ನಡೆದಿದೆ.

ಬಿಳಿನೆಲೆ ಗ್ರಾಮದ ಅರಿಗೇಣಿ ನಿವಾಸಿ ರವೀಂದ್ರ ಯಾನೆ ರೋಹಿತಾಶ್ವ (38) ಆತ್ಮಹತ್ಯೆ ಮಾಡಿಕೊಂಡವರು.

 ಕಳೆದ ಕೆಲವು ಸಮಯದಿಂದ ಸೊಂಟ ನೋವಿನಿಂದ ಬಳಲುತ್ತಿದ್ದ ರೋಹಿತಾಶ್ವ ಶುಕ್ರವಾರ ಸಂಜೆ ಮನನೊಂದು ತನ್ನ ಮನೆಯ ಸಮೀಪದ ಗುಡ್ಡೆಯಲ್ಲಿರುವ ಮರವೊಂದಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಸಲಾಗಿದೆ.

ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News