ಹಜ್ಜಾಜ್ ಗಳ ಪ್ರಥಮ ತಂಡ ಮಂಗಳೂರಿಗೆ ಆಗಮನ
ಮಂಗಳೂರು: ಸರಕಾರದ ಹಜ್ ಸಮಿತಿಯಿಂದ ಮಂಗಳೂರು ಮೂಲಕ ಹಜ್ಜ್ ಯಾತ್ರೆ ತೆರಳಿದ್ದ ಹಜ್ಜಾಜ್ ಗಳ ಪ್ರಥಮ ತಂಡ ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅವರನ್ನು ಹಜ್ ನಿರ್ವಹಣಾ ಸಮಿತಿ ವತಿಯಿಂದ ಸ್ವಾಗತಿಸಿ, ಬರಮಾಡಿಕೊಳ್ಳಲಾಯಿತು.
157 ಯಾತ್ರಾರ್ಥಿಕರ ಪ್ರಥಮ ತಂಡವು ಏರ್ ಇಂಡಿಯಾ ಎಕ್ಸ್ ಪ್ರೆಸ್ ಮೂಲಕ ಶನಿವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿತು. ಮಂಗಳೂರಿನಿಂದ ತೆರಳಿದ್ದ ನಾಲ್ಕನೇ ತಂಡದ ವಿಮಾನ ಇದಾಗಿದ್ದು, ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಯನೆಪೋಯ ಮುಹಮ್ಮದ್ ಕುಂಞಿ ಸ್ವಾಗತಿಸಿದರು. ನಿರ್ಗಮನ ವಿಭಾಗಕ್ಕೆ ಪ್ರಥಮವಾಗಿ ಆಗಮಿಸಿದ ಹಜ್ ಯಾತ್ರಿಕ ಅಶ್ರಫ್ ಹಾಜಿ ನೆಲ್ಯಾಡಿ ಅವರನ್ನು ಪ್ರಥಮವಾಗಿ ಸ್ವಾಗತಿಸಲಾಯಿತು. ರಾಷ್ಟ್ರಾದ್ಯಂತ ಇರುವ ಅನಾಮ್ ಪ್ರೇಮ್ ತಂಡದ ಮಂಗಳೂರು ವಿಭಾಗದ ವಿಷ್ಣುಮೂರ್ತಿ ನಾಯಕ್ ಅವರು ಎಲ್ಲಾ ಹಾಜಿಗಳನ್ನು ಗುಲಾಬಿ ಹೂ ಮತ್ತು ನೀರು ನೀಡಿ ಸ್ವಾಗತಿಸಿದರು.
ಹಜ್ ನಿರ್ವಹಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಮುಮ್ತಾಝ್ ಅಲಿ ಕೃಷ್ಣಾಪುರ, ಉಪಾಧ್ಯಕ್ಷ ಸಿ. ಮಹಮೂದ್ ಹಾಜಿ, ಕೋಶಾಧಿಕಾರಿ ಹನೀಫ್ ಹಾಜಿ ಮಂಗಳೂರು, ಜತೆ ಕಾರ್ಯದರ್ಶಿ ಹನೀಫ್ ಹಾಜಿ ಗೋಳ್ತಮಜಲು, ರಫೀಕ್ ಹಾಜಿ ಕೊಡಾಜೆ, ಮಾಧ್ಯಮ ಕಾರ್ಯದರ್ಶಿ ರಶೀದ್ ವಿಟ್ಲ, ರಝಾಕ್ ಹಾಜಿ ಪರ್ಲ್ಯ, ಹನೀಫ್ ಹಿಲ್ ಟಾಪ್ ಬಜ್ಪೆ, ಬಶೀರ್ ಹಾಜಿ, ಅಹಮದ್ ಬಾವಾ ಪಡೀಲ್, ಫಝಲ್ ಹಾಜಿ, ನಾಸಿರ್ ಲಕ್ಕಿಸ್ಟಾರ್, ವಕ್ಫ್ ಅಧಿಕಾರಿ ಅಬೂಬಕರ್ ಹಾಜಿ, ಹಜ್ ಸಮಿತಿ ಅಧಿಕಾರಿಗಳಾದ ಫೈರೋಝ್ ಪಾಷಾ, ಮುವಿಯರ್ ಪಾಷಾ, ಏರ್ ಇಂಡಿಯಾದ ಸುನಿಲ್ ಭಟ್, ಅರುಣ್, ನಿಲ್ದಾಣ ಪ್ರಾಧಿಕಾರದ ಹಮೀದ್ ವಿಟ್ಲ, ಅಬ್ದುರ್ರಹ್ಮಾನ್ ಮೊಗರ್ಪಣೆ, ರಶೀದ್ ವಿಟ್ಲ, ನೂರುದ್ದೀನ್ ಸಾಲ್ಮರ ಮೊದಲಾದವರು ಉಪಸ್ಥಿತರಿದ್ದರು.
ದ್ವಿತೀಯ ವಿಮಾನದಲ್ಲಿ 148 ಯಾತ್ರಿಕರ ಆಗಮನ
ಶನಿವಾರ ರಾತ್ರಿ 7.59ಕ್ಕೆ ದ್ವಿತೀಯ ವಿಮಾನ ಆಗಮಿಸಿದ್ದು ಇದರಲ್ಲಿ 148 ಹಜ್ಜಾಜ್ ಗಳು ಬಂದರು. ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಮೊಯ್ದಿನ್ ಬಾವ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಾಜಿ ಮೇಯರ್ ಕವಿತಾ ಸನಿಲ್, ಹಜ್ ನಿರ್ವಹಣಾ ಸಮಿತಿಯ ಹನೀಫ್ ಹಾಜಿ, ರಶೀದ್ ವಿಟ್ಲ, ಹನೀಫ್ ಹಿಲ್ ಟಾಪ್, ರಫೀಕ್ ಕೊಡಾಜೆ, ಸಿಎಚ್ ಉಳ್ಳಾಲ್ ಉಪಸ್ಥಿತರಿದ್ದರು.