×
Ad

ನೂತನ ಕಿಯಾ ಸೆಲ್ಟೋಸ್ ಮಂಗಳೂರಿನ ಎ.ಆರ್.ಎಂ. ಮೋಟಾರ್ಸ್‌ನಲ್ಲಿ ಬಿಡುಗಡೆ

Update: 2019-08-31 22:14 IST

ಮಂಗಳೂರು, ಆ.31: ವಿಶ್ವದ ಎಂಟನೇ ಅತಿದೊಡ್ಡ ವಾಹನ ತಯಾರಕ ಕಂಪೆನಿಯಾದ ಕಿಯಾ ಮೋಟಾರ್ಸ್‌ ಇಂಡಿಯಾದ ಅಧಿಕೃತ ಡೀಲರ್ ಪಾಲುದಾರ ಮಂಗಳೂರಿನ ಎಆರ್‌ಎಂ ಮೋಟಾರ್ಸ್‌ನಲ್ಲಿ ಕಿಯಾ ಸೆಲ್ಟೋಸ್ ಕಾರು ಶನಿವಾರ ಅನಾವರಣಗೊಳಿಸಲಾಯಿತು.

ತೇಜಸ್ವಿನಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ. ಶಾಂತಾರಾಮ ಶೆಟ್ಟಿ ಕದ್ರಿಯ ಸಿಟಿ ಆಸ್ಪತ್ರೆ ಬಳಿಯ ಎಆರ್‌ಎಂ ಮೋಟಾರ್ಸ್‌ನಲ್ಲಿ ಕಿಯಾ ಸೆಲ್ಟೋಸ್‌ನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಕಿಯಾ ಸೆಲ್ಟೋಸ್ ಅನೇಕ ವಿನೂತನ ಸೌಲಭ್ಯಗಳನ್ನು ಹೊಂದಿದ್ದು ಮಂಗಳೂರಿನ ಜನರು ಅದನ್ನು ಪೂರ್ಣ ಹೃದಯದಿಂದ ಸ್ವೀಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು.

ಶರವು ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ರಾಘವೇಂದ್ರ ಶಾಸ್ತ್ರಿ, ಎಆರ್‌ಎಂ ಮೋಟಾರ್ಸ್‌ನ ಚೇರ್‌ಮ್ಯಾನ್ ಆರೂರ್ ಪ್ರಭಾಕರ್ ರಾವ್, ವ್ಯವಸ್ಥಾಪಕ ನಿರ್ದೇಶಕ ಆರೂರ್ ಗಣೇಶ್ ರಾವ್, ಜನರಲ್ ಮೇನೆಜರ್ ವಿವಾನ್ ಸೋನ್ಸ್, ಕಸ್ಟಮರ್ ಕೇರ್ ಮೇನೆಜರ್ ನಿಹಾಲ್ ರಾವ್ ಮತ್ತು ಇತರರು ಉಪಸ್ಥಿತರಿದ್ದರು.

ಕೊರಿಯಾ ಕಂಪನಿಯಾದ ಕಿಯಾ ಮೋಟಾರ್ಸ್ 1944ರಲ್ಲಿ ಪ್ರಾರಂಭವಾಯಿತು, ಕಿಯಾ ಮೋಟಾರ್ಸ್, ಈಗ ಭಾರತೀಯ ಮಾರುಕಟ್ಟೆಗೆ ಕಾಲಿಡುತ್ತಿದೆ. ನೂತನ ಕಿಯಾ ಸೆಲ್ಟೋಸ್ ಪೆಟ್ರೋಲ್, ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಬರಲಿದೆ ಮತ್ತು ಚಾಲಕರು 'ನಾರ್ಮಲ್, ಇಕೊ ಮತ್ತು ಸ್ಪೋರ್ಟ್‌' ಮೋಡ್ ಆಯ್ಕೆ ಮಾಡಬಹುದು. ಕಿಯಾ ಸೆಲ್ಟೋಸ್ ಬಿಎಸ್ 6 ಕಂಪ್ಲೈಂಟ್ ಎಂಜಿನ್‌ನೊಂದಿಗೆ ಬರುತ್ತದೆ.

ಇಂಟೆನ್ಸ್ ರೆಡ್, ಗ್ಲೇಸಿಯರ್ ವೈಟ್ ಪರ್ಲ್, ಸ್ಟೀಲ್ ಸಿಲ್ವರ್, ಗ್ರಾವಿಟಿ ಗ್ರೇ, ಔರಾ ಬ್ಲ್ಯಾಕ್ ಪರ್ಲ್, ಇಂಟೆಲಿಜೆನ್ಸ್ ಬ್ಲೂ ಮತ್ತು ಪಂಚಿ ಆರೇಂಜ್ ಮುಂತಾದ 7 ಬಣ್ಣ ಗಳೊಂದಿಗೆ ಬರಲಿದೆ.

ಕಿಯಾ ಸೆಲ್ಟೋಸ್‌ನ ವೈಶಿಷ್ಟ್ಯಗಳು

ಸ್ಮಾರ್ಟ್ 8.0 ಹೆಡ್ ಅಪ್ ಡಿಸ್ಪ್ಲೇ, ಎಲ್‌ಇಡಿ ಸೌಂಡ್ ಮೂಡ್ ಲೈಟ್ ಹೊಂದಿರುವ ಬೋಸ್ ಪ್ರೀಮಿಯಂ 8 ಸ್ಪೀಕರ್ ಮ್ಯೂಸಿಕ್ ಸಿಸ್ಟಮ್,
10.25 ಎಚ್‌ಡಿ ಟಚ್‌ಸ್ಕ್ರೀನ್ ನ್ಯಾವಿಗೇಷನ್, ಯುವಿಒ ನಿಯಂತ್ರಣದೊಂದಿಗೆ ಸ್ಮಾರ್ಟ್ ಶುದ್ಧ ಏರ್ ಪ್ಯೂರಿಫೈಯರ್, ವ್ಯೂ ಮಾನಿಟರ್ ಬಿವಿಎಂನೊಂದಿಗೆ 360 ಡಿಗ್ರಿ ವ್ಯೂ ಕ್ಯಾಮೆರಾ, ಧ್ವನಿ ಗುರುತಿಸುವಿಕೆ ಮತ್ತು ರಿಮೋಟ್ ಸ್ಟಾರ್ಟ್ ಸೇರಿದಂತೆ 37 ಸಂಪರ್ಕ ವೈಶಿಷ್ಟ್ಯಗಳು, ಸಿಗ್ನೇಚರ್ ಟೈಗರ್ ನೋಸ್ ಗ್ರಿಲ್, ಆರ್ 17 ಕ್ರಿಸ್ಟಲ್ ಕಟ್ ಅಲಾಯ್ ವೀಲ್ಸ್, 6 ಏರ್‌ಬ್ಯಾಗ್, ಕ್ರೌನ್ ಜ್ಯುವೆಲ್ ಎಲ್‌ಇಡಿ ಹೆಡ್ ಲ್ಯಾಂಪ್ಸ್, ಸ್ವೀಪಿಂಗ್ ಎಲ್‌ಇಡಿ ಲೈಟ್ ಬಾರ್, ಹಾರ್ಟ್ ಬೀಟ್ ಎಲ್‌ಇಡಿ ಡಿಆರ್‌ಎಲ್, ಮಲ್ಟಿ-ಲೇಯರ್ ಟರ್ನ್, ಇಂಡಿಕೇಟರ್, ಹಾರ್ಟ್ ಬೀಟ್ ಎಲ್‌ಇಡಿ ಟೈಲ್ ಲ್ಯಾಂಪ್, ಐಸಿಇ ಕ್ಯೂಬ್ ಎಲ್‌ಇಡಿ ಫಾಗ್ ಲ್ಯಾಂಪ್ಸ್, ಎಲೆಕ್ಟ್ರಿಕ್ ಸನ್ ಪ್ರೂಫ್, ಡ್ಯುಯಲ್ ಟ್ರಿಮ್ಸ್ ಜಿಟಿ ಲೈನ್ ಮತ್ತು ಟೆಕ್ ಲೈನ್, ಡ್ಯುಯಲ್ ಮಫ್ಲರ್ ವಿನ್ಯಾಸ ರೆಡ್ ಬ್ರೇಕ್ ಕ್ಯಾಲಿಪರ್, ರೆಡ್ ಸೆಂಟರ್ ಕ್ಯಾಪ್, ಆಂಬಿಯೆಂಟ್ ಮೂಡ್ ಲೈಟಿಂಗ್, ಅಡ್ವಾನ್ಸ್ 7.0 ಕಲರ್ ಡಿಸ್ಪ್ಲೇ ಕ್ಲಸ್ಟರ್, ಮಲ್ಟಿ ಡ್ರೈವ್ ಮೋಡ್, ಮಲ್ಟಿ ಟ್ರಾಕ್ಷನ್ ಮೋಡ್, ಫ್ರಂಟ್ ಸೆನ್ಸರ್, 4 ಡಿಸ್ಕ್ ಬ್ರೇಕ್, ರಿಯರ್ ಸನ್ಶೇಡ್ ಕರ್ಟೈನ್ಸ್, ರಿಕ್ಲೈನಿಂಗ್ ರಿಯರ್
ಆಸನಗಳು / ಸೌರ ಗಾಜು / 8 ವ್ಯೂ ಡ್ರೈವರ್ ಪವರ್ ಸೀಟ್, ಡ್ರೈವಿಂಗ್ ರಿಯರ್ ವ್ಯೂ ಮಾನಿಟರ್ ಸೌಲಭ್ಯವಿದೆ.

ಕದ್ರಿ ಮಲ್ಲಿಕಟ್ಟೆ ಸಮೀಪವಿರುವ ಎ.ಆರ್.ಎಂ.ಮೋಟಾರ್ಸ್ ಅನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.: 9606013155, ಇಮೇಲ್: gm@armkia.com ಉಡುಪಿ: ಎನ್‌ಎಚ್ 66, ಕಟಪಾಡಿ, ಉಡುಪಿ, ಮೊ.ಸಂ.: 9606013152 ಕರೆ ಮಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News