×
Ad

ಇರಾನ್‌ನ ಸಂವರ್ಧಿತ ಯುರೇನಿಯಂ ಸಂಗ್ರಹದಲ್ಲಿ ಏರಿಕೆ: ಐಎಇಎ

Update: 2019-08-31 22:18 IST

ವಿಯೆನ್ನಾ, ಆ. 31: ಪ್ರಬಲ ದೇಶಗಳೊಂದಿಗೆ ಮಾಡಿಕೊಂಡ ಪರಮಾಣು ಒಪ್ಪಂದದ ಶರತ್ತುಗಳಿಗೆ ವ್ಯತಿರಿಕ್ತವಾಗಿ, ಇರಾನ್ ಸಂವರ್ಧಿತ ಯುರೇನಿಯಂ ಸಂಗ್ರಹವನ್ನು ಹೆಚ್ಚಿಸುತ್ತಿದೆ ಹಾಗೂ ಅಂಗೀಕೃತ ಮಿತಿಗಿಂತ ಯುರೇನಿಯಮನ್ನು ಹೆಚ್ಚಿನ ಶುದ್ಧತೆಗೆ ಪರಿಷ್ಕರಿಸುತ್ತಿದೆ ಎಂದು ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆ ‘ಅಂತರ್‌ರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ’ (ಐಎಇಎ)ಯು ತನ್ನ ಶುಕ್ರವಾರದ ವರದಿಯಲ್ಲಿ ಹೇಳಿದೆ.

ಸಂವರ್ಧಿತ ಯುರೇನಿಯಂ ಸಂಗ್ರಹದ 202.8 ಕೆಜಿ ಮಿತಿ ಹಾಗೂ ಅದರ 3.67 ಶೇಕಡ ಶುದ್ಧತೆ ಮಿತಿ- ಎರಡನ್ನೂ ಇರಾನ್ ಉಲ್ಲಂಘಿಸಿತ್ತು ಎಂದು ಅದು ತನ್ನ ಜುಲೈ ವರದಿಯಲ್ಲಿ ಹೇಳಿತ್ತು.

ಈಗ ಅದು 241.6 ಕೆಜಿ ಸಂವರ್ಧಿತ ಯುರೇನಿಯಂ ಸಂಗ್ರಹವನ್ನು ಹೊಂದಿದೆ ಹಾಗೂ ಶುದ್ಧತೆಯನ್ನು 4.5 ಶೇಕಡಕ್ಕೆ ಹೆಚ್ಚಿಸಿದೆ ಎಂದು ಶುಕ್ರವಾರದ ವರದಿಯಲ್ಲಿ ಅದು ಹೇಳಿದೆ. ಈ ಪ್ರಮಾಣ 90 ಶೇಕಡ ತಲುಪಿದರೆ ಅದು ಶಸ್ತ್ರ ದರ್ಜೆಯ ಪದಾರ್ಥ ಆಗುತ್ತದೆ. ಆದರೆ, ಆ ಮಿತಿಗಿಂತ ಅದು ಈಗ ತುಂಬಾ ಕೆಳಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News