ಖಾತೆಯಿಂದ ಹಣ ವಂಚನೆ: ದೂರು
Update: 2019-08-31 22:34 IST
ಉಡುಪಿ, ಆ.31: ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ಹಣ ಡ್ರಾ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲದ ಅನುಷ್ಕ ಮೂಖರ್ಯ(20) ಎಂಬವರು ಐಸಿಐಸಿಐ ಬ್ಯಾಂಕಿನಲ್ಲಿ ಎಸ್‌ಬಿ ಖಾತೆ ಹೊಂದಿದ್ದು, ಆ.30ರಂದು ಅವರ ಖಾತೆಯಿಂದ ಅವರ ಅನುಮತಿ ಇಲ್ಲದೇ ಮತ್ತು ತಿಳುವಳಿಕೆ ಬಾರದೇ ಎರಡು ಬಾರಿ ಒಟ್ಟು ರೂ. 9,998ರೂ. ಹಣವನ್ನು ಪೇಟಿಎಂ ಮಾಡಿ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.