×
Ad

'ಸನ್ನಡತೆ ತೋರುವ ರೌಡಿಗಳಿಗೆ ಸ್ವಉದ್ಯೋಗಕ್ಕೆ ಸಹಕಾರ'

Update: 2019-08-31 22:40 IST

ಮಂಗಳೂರು, ಆ.28: ಸನ್ನಡತೆ ತೋರುವ ರೌಡಿ ಶೀಟರ್‌ಗಳಿಗೆ ಮತ್ತವರ ಕುಟುಂಬಗಳಿಗೆಸಮಾಜದ ಮುಖ್ಯವಾನಿಗೆ ಬಂದು ಬದುಕು ಸಾಗಿಸಲು ಆರ್ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್. ಅವರು ಸನ್ನಡತೆ ತೋರುವ ರೌಡಿಗಳಿಗೆ ಸ್ವಉದ್ಯೋಗಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ಶನಿವಾರ ಸರಕಾರಿ ಐಟಿಐ ಮತ್ತು ಉದ್ಯಮ ಶೀಲತಾ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.

ಕದ್ರಿಹಿಲ್ಸ್‌ರ ಸರಕಾರಿ ಐಟಿಐ ಪ್ರಾಂಶುಪಾಲ ಗಿರಿಧರ ಸಾಲ್ಯಾನ್, ಸೆಂಟರ್ ಫಾರ್ ಎಂಟ್ರಪ್ರೆನ್ಯೂರ್‌ಶಿಪ್, ಅಪಾರ್ಚುನಿಟಿ ಆ್ಯಂಡ್ ಲರ್ನಿಂಗ್ ಸಂಸ್ಥೆಯ ಅಧಿಕಾರಿ ಪ್ರದೀಪ್, ಜಿಲ್ಲಾ ಕೌಶಲ್ಯ ಅಧಿಕಾರಿ ತಾರಾನಾಥ ಅವರ ಜತೆ ಆಯುಕ್ತರು ಸಮಾಲೋಚನೆ ನಡೆಸಿದರು.

ಸನ್ನಡತೆ ತೋರುವ ರೌಡಿಗಳಿಗೆ ಯಾವ ರೀತಿಯ ಉದ್ಯೋಗಗಳಲ್ಲಿ ತೊಡಗಿಕೊಳ್ಳ ಬಹುದು ಎನ್ನುವ ಬಗ್ಗೆ ಯೋಜನೆಗಳನ್ನು ರೂಪಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

ಸುಶಿಕ್ಷಿತರಲ್ಲದವರಿಗೆ ವೆಲ್ಡಿಂಗ್ ವೃತ್ತಿಯಲ್ಲಿ ಹಾಗೂ ಸುಶಿಕ್ಷಿತರಿಗೆ ಐಟಿ ಸಂಬಂಧಿತ ಉದ್ಯೋಗಗಳ ಕುರಿತಂತೆ ತರಬೇತಿ ನೀಡುವ ಬಗ್ಗೆ ಚರ್ಚಿಸಲಾಯಿತು ಎಂದು ಆಯುಕ್ತ ಡಾ. ಹರ್ಷ ಅವರು ತಿಳಿಸಿದ್ದಾರೆ.

ಮನಃ ಪರಿವರ್ತನೆಗೊಂಡು ಸನ್ನಡತೆಯಿಂದ ಜೀವನ ಸಾಗಿಸಲು ಬಯಸುವ ರೌಡಿಗಳಿಗೆ ಸರಿ ದಾರಿಗೆ ತರಲು ಅನುಕೂಲವಾಗುವಂತೆ ಪೊಲೀಸ್ ಆಯುಕ್ತರು ಆ. 28 ರಂದು ವಿನೂತನ ಆರ್ ಪ್ರಕಟಿಸಿದ್ದರು. ಆರು ತಿಂಗಳ ಕಾಲ ಪ್ರತಿ ಸೋಮವಾರದಂದು ತಪ್ಪದೆ ಆಯಾ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕಿ, ಒಂದು ವಾರದ ಸಮಗ್ರ ಚಟುವಟಿಕೆಗಳ ಬಗ್ಗೆ ಲಿಖಿತ ಮಾಹಿತಿ ನೀಡಿ ಸನ್ನಡತೆ ತೋರುವವರಿಗೆ ಇದು ಅನ್ವಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News