×
Ad

ಟ್ವಿಟರ್ ನಲ್ಲಿ #BoycottRedLabel ಟ್ರೆಂಡಿಂಗ್ ಗೆ ಕಾರಣವಾದ ಗಣೇಶ ಚತುರ್ಥಿಯ ಹಳೆಯ ಜಾಹೀರಾತು!

Update: 2019-09-01 16:17 IST

ಹೊಸದಿಲ್ಲಿ, ಸೆ.1: ರೆಡ್‍ ಲೇಬಲ್ ಚಹಾದ ಹಳೆಯ ಜಾಹೀರಾತೊಂದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ #BoycottRedLabel ಎನ್ನುವ ಅಭಿಯಾನ ಆರಂಭಗೊಂಡಿದೆ. ಗಣೇಶ ಚತುರ್ಥಿಯ ಆಸುಪಾಸಿನಲ್ಲಿ ಈ ಹಳೆಯ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಹಿಂದೂಗಳ ವಿರುದ್ಧದ ಜಾಹೀರಾತು ಎಂದು ಆರೋಪಿಸಲಾಗಿದೆ.

ಈ ಜಾಹೀರಾತಿನಲ್ಲಿ ಕಂಡುಬರುವಂತೆ ಹಿಂದೂ ವ್ಯಕ್ತಿಯೊಬ್ಬರು ಗಣೇಶ ಮೂರ್ತಿಯನ್ನು ಖರೀದಿಸಲು ಬರುತ್ತಾರೆ. ಆದರೆ ಅದನ್ನು ಮುಸ್ಲಿಂ ವ್ಯಕ್ತಿ ಸಿದ್ಧಪಡಿಸಿದ್ದು ಎಂದು ತಿಳಿದ ತಕ್ಷಣ ಖರೀದಿಗೆ ಹಿಂದೇಟು ಹಾಕುತ್ತಾರೆ. ಇದು ತಪ್ಪು ಸಂದೇಶ ಹರಡುತ್ತದೆ ಮತ್ತು ಹಿಂದೂಗಳನ್ನೂ ಕೆಟ್ಟದಾಗಿ ಚಿತ್ರಿಸುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.

"ರೆಡ್‍ ಲೇಬಲ್ ಪ್ರತಿಷ್ಠಿತ ಕಂಪನಿಯಾಗಿದ್ದು, ಭಾರತದ 130 ಕೋಟಿಯಲ್ಲಿ 80 ಕೋಟಿಗೂ ಅಧಿಕ ಮಂದಿ ಶಾಂತಿಯಿಂದ ಇದ್ದಾರೆ. ಈ ಕಾರಣದಿಂದ ಪ್ರತಿಯೊಬ್ಬರೂ ಶಾಂತವಾಗಿದ್ದಾರೆ. ಆದ್ದರಿಂದ ಹಿಂದೂ ಹಬ್ಬದ ವೇಳೆ ಪಾಠ ಮಾಡಲು ಬರಬೇಡಿ" ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News