ರಾಮಕೃಷ್ಣ ಮಿಷನ್‌ನಿಂದ ಉರ್ವ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ

Update: 2019-09-01 12:04 GMT

ಮಂಗಳೂರು, ಸೆ.1: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಆಯೋಜಿಸಲ್ಪಡುತ್ತಿರುವ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 39ನೇ ಶ್ರಮದಾನವನ್ನು ಊರ್ವಾ ಬೋಳೂರು ಪರಿಸರದಲ್ಲಿ ಹಮ್ಮಿಕೊಳ್ಳಲಾಯಿತು.

ಬೆಳಗ್ಗೆ 7.30ಕ್ಕೆ ಉರ್ವಾ ನೂತನ ಮಾರುಕಟ್ಟೆ ಮುಂಭಾಗದಲ್ಲಿ ಶ್ರಮದಾನಕ್ಕೆ ಚಾಲನೆ ನೀಡಲಾಯಿತು. ಪೊಲೀಸ್ ಉಪ ಆಯುಕ್ತ ಅರುಣಾಂಗ್ಶು ಗಿರಿ (ಕಾನೂನು ಮತ್ತು ಸುವ್ಯವಸ್ಥೆ) ಶ್ರಮದಾನಕ್ಕೆ ಹಸಿರು ನಿಾನೆ ತೋರಿ ಶುಭಾರಂಭಗೊಳಿಸಿದರು.

ಸ್ವಚ್ಛತಾ ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಸುಭಾಶ್ಚಂದ್ರ, ಶೇಷಪ್ಪಅಮೀನ್, ಸ್ಮಿತಾ ಶೆಣೈ, ವಾಸಂತಿ ನಾಯಕ್, ಮಧುಚಂದ್ರ ಅಡ್ಯಂತಾಯ, ಪ್ರೊ. ಸತೀಶ್ ಭಟ್, ಕಿರಣ ಫರ್ನಾಂಡಿಸ್, ಪ್ರವೀಣ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಪಿ ಅರುಣಾಂಗ್ಶು ಅವರು ಮಂಗಳೂರು ನಗರ ಸ್ವಚ್ಛತೆಯಲ್ಲಿ ಹೆಸರುವಾಸಿಯಾಗಿದೆ. ಕರ್ನಾಟಕದ ಅನ್ಯಭಾಗಗಳಿಗೆ ಹೋಲಿಸಿದರೆ ಕರಾವಳಿಯ ಜನರು ಪ್ರಜ್ಞಾವಂತರು, ಸುಶಿಕ್ಷಿತರು. ಶುಚಿತ್ವಕ್ಕೆ ಆದ್ಯತೆಯನ್ನು ನೀಡಿದ ಹೆಗ್ಗಳಿಕೆ ಈ ಭಾಗದ ಜನರಿಗೆ ಸಲ್ಲಬೇಕು. ರಾಮಕೃಷ್ಣ ಮಿಷನ್ ವತಿಯಿಂದ ನಡೆಯುತ್ತಿರುವ ಈ ಸ್ವಚ್ಛತಾ ಅಭಿಯಾನಕ್ಕೆ ಅಗತ್ಯವಿದ್ದಡೆಯಲ್ಲಿ ಇಲಾಖೆಯಿಂದ ಸರ್ವರೀತಿಯಿಂದಲೂ ಸಹಕಾರವನ್ನು ನೀಡಲಾಗುವುದು ಎಂದರು.

39ನೇ ಶ್ರಮದಾನದ ಪ್ರಯುಕ್ತ ಒಟ್ಟು ನಾಲ್ಕು ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಉರ್ವಾ ಬೋಳೂರಿನ ಕೊರಗಜ್ಜ ದೈವಸ್ಥಾನದ ಬಳಿಯಿದ್ದ ಕಸದ ರಾಶಿಯನ್ನು ತೆಗೆದು ಸ್ವಚ್ಚಗೊಳಿಸಲಾಯಿತು. ಎರಡನೆಯದಾಗಿ ಉರ್ವಾ ಮಾರುಕಟ್ಟೆಯ ಹಿಂಭಾದಲ್ಲಿದ್ದ ತ್ಯಾಜ್ಯ ಹಾಗೂ ಕಲ್ಲುಮಣ್ಣುಗಳ ರಾಶಿಯನ್ನು ಜೆಸಿಬಿ ಸಹಾಯದಿಂದ ತೆಗೆಯಲಾಯಿು. ಮೂರನೆಯದಾಗಿ ಸುಲ್ತಾನ ಬತ್ತೇರಿಯ ಹತ್ತಿರದಲ್ಲಿ ರಸ್ತೆಯ ಬದಿ ಬಿದ್ದುಕೊಂಡಿದ್ದ ಕೊಳೆ ಕಸವನ್ನು ತೆಗೆದು ಶುಚಿಗೊಳಿಸಲಾಯಿತು. ನಾಲ್ಕನೆಯದಾಗಿ ಅಳಕೆ ತೋಡಿನ ಬಳಿಯಿದ್ದ ಕಸದರಾಶಿಯನ್ನು ತೆರವು ಮಾಡಲಾಯಿತು. ಜೊತೆಗೆ ಊರ್ವಾ ಮಾರುಕಟ್ಟೆ ಮುಂಭಾಗ ಹಾಗೂ ಅಕ್ಕಪಕ್ಕದ ರಸ್ತೆಗಳನ್ನು ಗುಡಿಸಿ ಸ್ವಚ್ಛಗೊಳಿಸಲಾಯಿತು.

ಅಭಿಯಾನದ ಪ್ರಧಾನ ಸಂಯೋಜಕರಾದ ಉಮಾನಾಥ್ ಕೋಟೆಕಾರ್, ದಿಲ್‌ರಾಜ್ ಆಳ್ವ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿದರು. ನಿಟ್ಟೆ ಫಿಸಿಯೊಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗಿಯಾದರು. ಸುಭೋದಯ ಆಳ್ವ, ಸುರೇಶ ಶೆಟ್ಟಿ ಹಾಗೂ ಇತರ ಕಾರ್ಯಕರ್ತರು ಸುತತಿಮುತತಿಲಿನ ಅಂಗಡಿ ಹಾಗೂ ಮನೆಗಳಿಗೆ ತೆರಳಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಿದರು. ಕಳೆದೆರಡು ವಾರಗಳಿಂದ ಹಂಪನಕಟ್ಟೆಯಲ್ಲಿ ಕೈಗೊಳ್ಳಲಾಗುತ್ತಿರುವ ಚಿತ್ರ ಕಲಾಕೃತಿಗಳ ಸ್ವಚ್ಛತೆಯನ್ನು ಈ ವಾರವೂ ಮುಂದುವರೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News