ಉಡುಪಿ: ಗಣೇಶ ಚತುರ್ಥಿಗೆ ಬೆಲ್ಲದ ಗಣಪತಿ ಪ್ರದರ್ಶನ
Update: 2019-09-01 18:08 IST
ಉಡುಪಿ, ಸೆ.1: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಗಣೇಶೋತ್ಸವದ ಪ್ರಯುಕ್ತ ಮಂಡ್ಯ ಬೆಲ್ಲದಿಂದ ನಿರ್ಮಿಸಲಾದ ಪರಿಸರ ಸ್ನೇಹಿ ಬೆಲ್ಲದ ಗಣಪತಿಯ ಪ್ರದರ್ಶನವನ್ನು ಚಿತ್ತರಂಜನ್ ಸರ್ಕಲ್ ಬಳಿಯ ಮಾರುಥಿ ವಿಥಿಕಾದಲ್ಲಿ ಏರ್ಪಡಿಸಲಾಗಿದೆ.
ಮಂಡ್ಯದಿಂದ 240 ಕೆಜಿ ತೂಕದ ಬೆಲ್ಲದ ಗಟ್ಟಿಯನ್ನು ಗಣಪತಿ ನಿರ್ಮಿಸಲು ವಿಶೇಷವಾಗಿ ಕಟಪಾಡಿಯ ವಿಜೇಂದ್ರ ಭಟ್ ತಯಾರಿಸಿ ಸಂಘಟಕರಿಗೆ ಒದಗಿಸಿದ್ದಾರೆ. ಬೆಲ್ಲದ ಗಣಪತಿಯನ್ನು ಕಲಾವಿದರಾದ ಲೊಕೇಶ್ ಚಿಟ್ಪಾಡಿ, ರವಿ ಹಿರೆಬೆಟ್ಟು, ವಾಸುದೇವ ಚಿಟ್ಪಾಡಿ ತಂಡ ನಾಜೂಕು ಕಲಾತ್ಮಾಕವಾಗಿ ತಯಾರಿಸಿದೆ. ಸುಧಾಕರ ಪಾಣ ಗಣಪತಿ ಮಂಟಪವನ್ನು ತೆಂಗಿನ ಗರಿಗಳಿಂದ ಅಲಂಕರಿಸಿಲಿದ್ದಾರೆ.
ಆ.2ರಂದು ಬೆಳಿಗ್ಗೆ 9 ಗಂಟೆಗೆ ಸರ್ವಧರ್ಮದ ಗಣ್ಯರ ಮೂಲಕ ಬೆಲ್ಲದ ಗಣಪತಿ ಪ್ರದರ್ಶನ ಉಧ್ಘಾಟನೆಗೊಳ್ಳಲಿದೆ. ಆ ಬಳಿಕ ಸಾರ್ವಜನಿಕರ ವಿಕ್ಷಣೆಗೆ ಅನುವು ಮಾಡಿ ಕೊಡಲಾಗುವುದೆಂದು ಸಮಿತಿಯ ನಿತ್ಯಾನಂದ ಒಳಕಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.