‘ಸೆರಮಿಕ್ ಪ್ರೊ ಮಂಗಳೂರು’ ಶೋರೂಂ ಶುಭಾರಂಭ
ಮಂಗಳೂರು, ಸೆ.1: ಡೆಲ್ಟಾ ಗ್ರೂಪ್‌ನ ಅಂಗ ಸಂಸ್ಥೆಯಾದ 'ಸೆರಮಿಕ್ ಪ್ರೊ ಮಂಗಳೂರು' ಇದರ ನೂತನ ಶೋರೂಂ ಮಂಗಳೂರು ನಗರದ ಕೂಳೂರು ಫೆರ್ರಿ ರಸ್ತೆಯ ಡೆಲ್ಟಾ ಹೌಸ್ ಕಟ್ಟಡದ ನೆಲಮಹಡಿಯಲ್ಲಿ ರವಿವಾರ ಸಂಜೆ ಶುಭಾರಂಭಗೊಂಡಿತು.
ಕಾರ್ಯಕ್ರಮಕ್ಕೆ ಸೆರಮಿಕ್ ಪ್ರೊ ಇಂಡಿಯಾ ಸಂಸ್ಥಾಪಕ ನಿಶಾಂತ್ ಶಾಬೂ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಸೆರಮಿಕ್ ಪ್ರೊ ಎನ್ನುವುದು ರಷ್ಯನ್ ಬ್ರಾಂಡ್ ಆಗಿದ್ದು, ವಿಶ್ವಾದ್ಯಂತ 79 ದೇಶಗಳಲ್ಲಿ ಇದರ ಸಂಸ್ಥೆಗಳಿವೆ. ಭಾರತದಲ್ಲಿಯೇ 36 ಬ್ರಾಂಚ್‌ಗಳು ಕಾರ್ಯಾಚರಿಸುತ್ತಿವೆ. ಮಂಗಳೂರಿನಲ್ಲಿ ಸೆರಮಿಕ್ ಪ್ರೊ ಇದರ ಮೊದಲ ಬ್ರಾಂಚ್ ಆಗಿದೆ ಎಂದರು.
ಸಂಸ್ಥೆಯು ಭವಿಷ್ಯದಲ್ಲಿ ಇನ್ನೂ ಉನ್ನತ ಸ್ಥಾನಕ್ಕೇರಲಿದೆ. ರವಿವಾರ ಶುಭಾರಂಭಗೊಂಡ ‘ಸೆರಮಿಕ್ ಪ್ರೊ ಮಂಗಳೂರು’ ಬ್ರಾಂಚ್ ದೇಶದಲ್ಲಿಯೇ ಹೆಸರುವಾಸಿ ಮತ್ತು ನಂಬಿಕಾರ್ಹ ಸ್ಥಾನ ಪಡೆಯಲಿದೆ ಎಂದು ಅವರು ತಿಳಿಸಿದರು.
ಸೆರಮಿಕ್ ಪ್ರೊ ಮತ್ತು ನ್ಯಾನೋ ಶೈನ್ ಲಿ. ಲೇಪನ ಉದ್ಯಮದಲ್ಲಿ ಕ್ರಿಯಾತ್ಮಕತೆಯ ಖ್ಯಾತಿಗಳಿಸಿದೆ. ಸೆರಮಿಕ್ ಮೊಲೆಕ್ಯುಲರ್ ಸಂಯುಕ್ತ (ನ್ಯಾನೋಸೆರಮಿಕ್ಸ್) ಗಳ ಆಧಾರದ ಮೇಲೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದೆ, ಸಂಸ್ಥೆ ಅತ್ಯದ್ಭುತ ಸೇವೆ ನೀಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡೆಲ್ಟಾ ಗ್ರೂಪ್ ಮಂಗಳೂರು ಇದರ ಚೇರ್‌ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಹ್ಮದ್ ಮೊಯ್ದಿನ್, ನಿರ್ದೇಶಕ ಶಾಮಿಲ್ ಅಹ್ಮದ್ ಮೋಝಮ್ ಮತ್ತಿತರರು ಉಪಸ್ಥಿತರಿದ್ದರು.
ಕೊಡಿಯಾಲ್‌ಬೈಲ್ ಯೆನಪೊಯ ಮಸೀದಿ ಉಸ್ತಾದ್ ಜಿ.ಎಂ. ಇಸ್ಮಾಯೀಲ್ ಮದನಿ ದುಆಗೈದರು.