ಉಡುಪಿ ಬಿಆರ್‌ಎಸ್ ಆಸ್ಪತ್ರೆ ಕಾಮಗಾರಿ ಸ್ಥಗಿತಕ್ಕೆ ನಗರಸಭೆ ಸೂಚನೆ
ಉಡುಪಿ, ಸೆ.1: ಉಡುಪಿ ನಗರದ ಕೆ.ಎಂ.ಮಾರ್ಗದಲ್ಲಿರುವ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿ ಉಡುಪಿ ನಗರಸಭೆ ಪೌರಾಯುಕ್ತರು, ಬಿ.ಆರ್.ಎಸ್. ಹೆಲ್ತ್ ಆ್ಯಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರೈವೆಟ್ ಲಿಮಿಟೆಡ್‌ಗೆ ಆ.26ರಂದು ನೋಟೀಸ್ ಜಾರಿ ಮಾಡಿದೆ.
ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ನೆಲೆ ಅಗೆತ ಮಾಡಲು ನಿರಾ ಕ್ಷೇಪಣಾ ಪತ್ರವನ್ನು ನಗರಸಭೆಯಿಂದ ನೀಡಲಾಗಿತ್ತು. ನಗರಾಭಿವೃದ್ಧಿ ಪ್ರಾಧಿ ಕಾರದ ಸಭೆಯಲ್ಲಿ ಮೂರು ತಳ ಮಹಡಿ ನಿರ್ಮಿಸಲು ನಿಯಮಾವಳಿಯಲ್ಲಿ ಅವಕಾಶ ಇಲ್ಲದಿರುವುದರಿಂದ ಎರಡು ತಳ ಮಹಡಿಗಳನ್ನು ವಾಹನ ನಿಲು ಗಡೆಗೆ ಬಳಸಲು ಅನುಮತಿ ನೀಡಿ ತೀರ್ಮಾನಿಸಲಾಗಿತ್ತು.
ನಗರಸಭೆಯ ಸಹಾಯಕ ಅಭಿಯಂತರ ವರದಿ ಪ್ರಕಾರ ಇಲ್ಲಿ ಎರಡರ ಬದಲು ಮೂರು ತಳ ಮಹಡಿಗಾಗಿ ಮಣ್ಣಿನ ಅಗೆತ ಮಾಡಲಾಗಿದೆ. ಪ್ರಾಧಿ ಕಾರ ನೀಡಿರುವ ಸೂಚನೆಯಂತೆ ಎರಡು ತಳ ಮಹಡಿಗಾಗಿ ಮಾತ್ರ ಅವಕಾಶ ಇರುವುದರಿಂದ ಒಂದು ಮಹಡಿಯನ್ನು ಮುಚ್ಚ ಬೇಕಾಗುತ್ತದೆ ಹಾಗೂ ನಗರ ಸಭೆಯಿಂದ ಕಟ್ಟಡ ಪರವಾನಿಗೆ ಪಡೆದ ನಂತರವೇ ಕಾಮಗಾರಿ ುುಂದು ವರೆಸುವಂತೆ ತಿಳಿಸಲಾಗಿದೆ.
ಅಲ್ಲಿಯವರೆಗೆ ಕಾಮಗಾರಿಯನ್ನು ಸ್ಥಗಿತಗೊಳಿಸಲು ನಗರಸಭೆ ಸೂಚನೆ ನೀಡಿದೆ. ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಲ್ಲ ಮುಂದೆ ಆಗಬಹುದಾದ ಕಷ್ಟಗಳಿಗೆ ನೀವೇ ಜವಾಬ್ದಾರರೆಂದು ನೋಟೀಸ್‌ನಲ್ಲಿ ತಿಳಿಸಲಾಗಿದೆ.
‘ಕಾಮಗಾರಿ ಸ್ಥಗಿತಗೊಳಿಸುವಂತೆ ನಗರಸಭೆ ಸೂಚನೆ ನೀಡಿದರೂ ಕೂಡ ಆಸ್ಪತ್ರೆಯವರು ಈಗಲೂ ರಾತ್ರಿ ಹಗಲು ನಿರಂತರವಾಗಿ ಕಾಮಗಾರಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದು ಸರಿಯಲ್ಲ. ಕೂಡಲೇ ಕಾಮ ಗಾರಿಯನ್ನು ನಿಲ್ಲಿಸಿ ನಗರ ಸಭೆಯಿಂದ ಕಟ್ಟಡ ಪರವಾನಿಗೆ ಪಡೆಯಬೇಕು’ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.