ಪ್ರಕೃತಿಯೊಳಗಿನ ಮಾನವನ ಸಂಬಂಧ ಅನನ್ಯ: ಪೂರ್ಣಿಮಾ ಸುರೇಶ್

Update: 2019-09-01 16:20 GMT

ಶಿರ್ವ, ಸೆ.1: ಸಕಲ ಚರಾಚರಗಳಲ್ಲಿಯೂ ದೈವತ್ವವನ್ನು ಕಾಣುವ ಹಿಂದೂ ಧಾರ್ಮಿಕ ಅನುಷ್ಟಾನಗಳು ಮಾನವ ಮತ್ತು ಪ್ರಕೃತಿಗೆ ಇರುವ ಅನೂಚಾನ ಸಂಬಂಧಗಳನ್ನು ಪ್ರತಿಬಿಂಬಿಸುತ್ತವೆ. ಪ್ರಕೃತಿಯೊಳಗಿನ ಮಾನವನ ಸಂಬಂಧ ಅನನ್ಯ ಎಂದು ಮಂಗಳೂರು ವಿವಿ ಕೊಂಕಣಿ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯೆ, ಲೇಖಕಿ ಪೂರ್ಣಿಮಾ ಸುರೇಶ್ ಹೇಳಿದ್ದಾರೆ.

ಬಂಟಕಲ್ಲು ಶ್ರೀದುರ್ಗಾ ಚಂಡೆ ಬಳಗದ ವತಿಯಿಂದ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಗುರ್ನೆಬೆಟ್ಟು ಗಣಪತಿ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸೌಂದರ್ಯ ಸ್ಫರ್ಧೆಯಲ್ಲಿ ಉನ್ನತ ಪ್ರಶಸ್ತಿ ವಿಜೇತೆ ಕೃತಿ ವಿಜಯಾನಂದ ನಾಯಕ್, ಚಿತ್ರಕಲಾವಿದ ಹರಿಪ್ರಸಾದ್ ಬೋರ್ಕಾರ್, ಬಾಲಪ್ರತಿಭೆ ಪ್ರತ್ಯೂಷಾ ಪ್ರಶಾಂತ್ ನಾಯಕ್ ರವರನ್ನು ಸನ್ಮಾನಿಸಲಾಯಿತು.

ಪ್ರತಿಭಾನ್ವಿತ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಚಂಡಬಳಗದ ಸ್ಥಾಪಕಾಧ್ಯಕ್ಷೆ ಲೀಲಾವತಿ ಎಲ್. ಪಾಟ್ಕರ್, ರಾಜಾಪುರ ಸಾರಸ್ವತ ಯುವವೃಂದದ ಅಧ್ಯಕ್ಷ ವೀರೇಂದ್ರ ಪಾಟ್ಕರ್ ಕೋಡುಗುಡ್ಡೆ, ಶ್ರೀದುರ್ಗಾ ಮಹಿಳಾ ವೃಂದದ ಅಧ್ಯಕ್ಷೆ ಅರುಂಧತಿ ಜಿ.ಪ್ರಭು, ದೇವಳದ ಆಡಳಿತ ಮಂಡಳಿ ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ
ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷೆ ಗೀತಾ ವಾಗ್ಳೆ ಸ್ವಾಗತಿಸಿದರು.ಪ್ರಭಾ ನಾಯಕ್ ವರದಿ ಓದಿದರು. ಭವಾನಿ ನಾಯಕ್ ಕಾರ್ಯಕ್ರಮ ನಿರೂಪಿಸಿ ದರು. ಸುನೀತಾ ಹರೀಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News