ಮಂಗಳೂರು: 2ನೇ ದಿನ 300 ಹಜ್ಜಾಜ್ ಗಳು ಆಗಮನ
ಮಂಗಳೂರು, ಸೆ.1: ರಾಜ್ಯ ಸರಕಾರದ ಹಜ್ ಸಮಿತಿಯಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ತೆರಳಿದ್ದ ಹಜ್ ಯಾತ್ರಿಕರು ರವಿವಾರ ಎರಡು ತಂಡಗಳಾಗಿ ಆಗಮಿಸಿದರು.
ಜಿದ್ದಾದಿಂದ ಹೊರಟ ಪ್ರಥಮ ಏರ್ ಇಂಡಿಯಾ ವಿಮಾನವು ಮಧ್ಯಾಹ್ನ 1:54ಕ್ಕೆ ಹಾಗೂ ದ್ವಿತೀಯ ವಿಮಾನವು ಸಂಜೆ 5:50ಕ್ಕೆ ಮಂಗಳೂರು ತಲುಪಿತು. ಎರಡೂ ವಿಮಾನಗಳಲ್ಲಿ ತಲಾ 150 ಹಜ್ಜಾಜ್ ಗಳಿದ್ದರು.
ಮಂಗಳೂರು ಹಜ್ ನಿರ್ವಹಣಾ ಸಮಿತಿ ಅಧ್ಯಕ್ಷ ಯೆನಪೊಯ ಮುಹಮ್ಮದ್ ಕುಂಞಿ, ಪ್ರಧಾನ ಕಾರ್ಯದರ್ಶಿ ಮುಮ್ತಾಝ್ ಅಲಿ ಕೃಷ್ಣಾಪುರ, ಉಪಾಧ್ಯಕ್ಷ ಸಿ.ಮುಹಮ್ಮದ್ ಹಾಜಿ, ಕೋಶಾಧಿಕಾರಿ ಹನೀಫ್ ಹಾಜಿ ಮಂಗಳೂರು, ಜೊತೆ ಕಾರ್ಯದರ್ಶಿಗಳಾದ ಹನೀಫ್ ಹಾಜಿ ಗೋಳ್ತಮಜಲು ಹಾಗೂ ರಫೀಕ್ ಹಾಜಿ ಕೊಡಾಜೆ, ಮಾಧ್ಯಮ ಕಾರ್ಯದರ್ಶಿ ರಶೀದ್ ವಿಟ್ಲ, ಸಿ.ಎಚ್. ಉಳ್ಳಾಲ್, ಸುಲೈಮಾನ್ ಹಾಜಿ ಕೊಣಾಜೆ, ರಝಾಕ್ ಬಿ.ಸಿ.ರೋಡ್, ನೌಶಾದ್ ಹಾಜಿ ಸೂರಲ್ಪಾಡಿ, ಸುಹೈಲ್ ಕಂದಕ್, ಅಹ್ಮದ್ ಬಾವ ಪಡೀಲ್, ಫಝಲ್ ಹಾಜಿ, ಅದ್ದು ಹಾಜಿ, ಬಶೀರ್ ಹಾಜಿ, ಹನೀಫ್ ಹಿಲ್‌ಟಾಪ್, ನಾಸಿರ್ ಲಕ್ಕಿಸ್ಟಾರ್, ಜಿಲ್ಲಾ ಅಲ್ಪಸಂಖ್ಯಾತ ನಿಗಮದ ವ್ಯವಸ್ಥಾಪಕ ಸಫ್ವಾನ್ ವಿಟ್ಲ, ಹಜ್ ಸಮಿತಿ ಅಧಿಕಾರಿಗಳಾದ ಮುವಿಯರ್ ಪಾಷಾ ಹಾಗೂ ಫೈರೋಝ್ ಪಾಷಾ, ಶಫೀವುಲ್ಲಾ ಕಡಬ, ಸಲೀಲ್ ಬಜ್ಪೆ, ವಿಮಾನ ನಿಲ್ದಾಣ ಪ್ರಾಧಿಕಾರದ ಹಮೀದ್ ವಿಟ್ಲ, ಏರ್ ಇಂಡಿಯಾದ ಅರುಣ್ ಮತ್ತಿತರರು ಹಜ್ ಯಾತ್ರಿಕರನ್ನು ಬರಮಾಡಿಕೊಂಡರು.
ಶನಿವಾರ 305 ಯಾತ್ರಿಕರು ಎರಡು ತಂಡವಾಗಿ ಆಗಮಿಸಿದ್ದರು.