×
Ad

ಮಂಗಳೂರು: ಇಂಡಿಯನ್ ಡಿಸೈನ್ ಸ್ಕೂಲ್‌ನಿಂದ ದ್ವಿತೀಯ ಡಿಸೈನ್ ಸೆಲೆಬ್ರೇಶನ್

Update: 2019-09-01 23:03 IST

ಮಂಗಳೂರು, ಸೆ.1: ಇಂಡಿಯನ್ ಡಿಸೈನ್ ಸ್ಕೂಲ್ ತನ್ನ ದ್ವಿತೀಯ ವರ್ಷದ ಡಿಸೈನ್ ಸೆಲೆಬ್ರೆಶನ್ ಕಾರ್ಯಕ್ರಮವನ್ನು  ಶನಿವಾರಂದು ಆಯೋಜಿಸಿತು.

ಒಂದು ಮಾಸಿಕ ಕಾರ್ಯಕ್ರಮವಾಗಿರುವ ಡಿಸೈನ್ ಸೆಲೆಬ್ರೆಶನ್‌ನಲ್ಲಿ ದೇಶದಾದ್ಯಂತದ ಪ್ರಶಸ್ತಿ ವಿಜೇತ, ಪ್ರತಿಷ್ಠಿತ ಶಿಲ್ಪ ಕಲೆಗಾರರು ಮತ್ತು ಇಂಟೀರಿಯರ್ ಡಿಸೈನರ್ಸ್‌ಗಳನ್ನು ಆಹ್ವಾನಿಸಲಾಗುತ್ತದೆ ಮತ್ತು ಅವರು ವಿನ್ಯಾಸ, ಯೋಜನೆ ಮತ್ತು ವೃತ್ತಿಪರ ಹವ್ಯಾಸಗಳ ಕುರಿತು ಮಾಹಿತಿ ನೀಡುತ್ತಾರೆ. ಯೋಚನೆಗಳು ಮತ್ತು ಜ್ಞಾನದ ಪರಸ್ಪರ ವರ್ಗಾವಣೆ ನಡೆಯುವ ಈ ಕಾರ್ಯಕ್ರಮ ಯುವ ಮತ್ತು ಕ್ರಿಯಾಶೀಲ ವಿದ್ಯಾರ್ಥಿಗಳು ಅತ್ಯುತ್ತಮವಾದುದನ್ನು ಸಾಧಿಸಲು ಸ್ಫೂರ್ತಿ ತುಂಬುವ ವೇದಿಕೆಯಾಗಿದೆ.

ಎ.ಕೆ ಗ್ರೂಪ್ಸ್ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಶಿಲ್ಪಿ ಚೇತನ್ ಕಾಮತ್ ಭಾಗವಹಿಸಿದ್ದರು. ಚೇತನ್ ಕಾಮತ್ ಅವರು ಪ್ರಶಸ್ತಿ ವಿಜೇತ ಶಿಲ್ಪಕಲೆಗಾರ ಮತ್ತು ಇಂಟಿರಿಯರ್ ಡಿಸೈನರ್ ಆಗಿದ್ದಾರೆ. ಪ್ಲಾನ್ಝ್ ಅನ್‌ಲಿಮಿಟೆಡ್-ಆರ್ಕಿಟೆಕ್ಟ್ಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿರುವ ಅವರು ಆ ಸಂಸ್ಥೆಯ ಮುಖ್ಯ ಶಿಲ್ಪಿಯೂ ಆಗಿದ್ದಾರೆ ಮತ್ತು ಸಿಒಎ ಸದಸ್ಯರೂ ಆಗಿದ್ದಾರೆ.

ಈ ತಿಂಗಳ ಕಾರ್ಯಕ್ರಮದ ವಿಷಯ ಶಿಕ್ಷಣದಲ್ಲಿ ಇಂಟಿರಿಯರ್ ಡಿಸೈನ್‌ಗೆ ವ್ಯವಹಾರಿಕ ಸ್ಥಾನಮಾನ ಎಂಬುದಾಗಿತ್ತು. ಈ ವಿಷಯದ ಕುರಿತು ಕಾಮತ್ ಅವರು ನೀಡಿದ ಮಾಹಿತಿ ವಿದ್ಯಾರ್ಥಿಗಳಿಗೆ ವಸ್ತುಗಳು, ನಿರ್ಮಾಣ ನಿರ್ವಹಣೆ ಮತ್ತು ಯೋಜನೆ ಕಾರ್ಯರೂಪಕ್ಕೆ ತರುವ ಬಗ್ಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಎ.ಕೆ ಗ್ರೂಪ್‌ನ ಪರಿಚಯ ಮಾಡಿಕೊಡಲಾಯಿತು. ಈ ವೇಳೆ ಎ.ಕೆ ಗ್ರೂಪ್ ನಿರ್ದೇಶಕ ಡಾ. ಪ್ರಶಾಂತ್ ಎಂ.ಎ ತಮ್ಮ ಸಂಸ್ಥೆ ಶಿಲ್ಪಕಲೆ ಮತ್ತು ಇಂಟಿರಿಯರ್ ಡಿಸೈನ್‌ಗೆ ಒದಗಿಸುವ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಎ.ಕೆ ಗ್ರೂಪ್ ಆಫ್ ಕಂಪೆನೀಸ್ ನಿರ್ದೇಶಕ ನೌಶಾದ್ ಎ.ಕೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News