ಸೇನೆ ಉಪ ವರಿಷ್ಠರಾಗಿ ಲೆ. ಜನರಲ್ ಮುಕುಂದ್ ನಾರಾವನೆ ಅಧಿಕಾರ ಸ್ವೀಕಾರ
Update: 2019-09-01 23:13 IST
ಹೊಸದಿಲ್ಲಿ, ಸೆ. 1: ಸೇನೆಯ ಉಪ ವರಿಷ್ಠರಾಗಿ ಲೆಫ್ಟಿನೆಂಟ್ ಜನರಲ್ ಮುಕುಂದ್ ನಾರಾವನೆ ರವಿವಾರ ಅಧಿಕಾರ ಸ್ವೀಕರಿಸಿದ್ದಾರೆ. ಡಿಸೆಂಬರ್ 31ರಂದು ಜನರಲ್ ಬಿಪಿನ್ ರಾವತ್ ನಿವೃತ್ತರಾಗಲಿದ್ದು, ಹಿರಿಯ ಕಮಾಂಡರ್ ಆಗಿರುವ ಲೆಫ್ಟಿನೆಂಟ್ ಜನರಲ್ ನಾರಾವನೆ ಸೇನಾ ವರಿಷ್ಠರ ಹುದ್ದೆಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿ ಇರಲಿದ್ದಾರೆ.
ಲೆಫ್ಟೆನೆಂಟ್ ಜನರಲ್ ನಾರಾವನೆ ಅವರು ಶನಿವಾರ ಸೇವೆಯಿಂದ ನಿವೃತ್ತಿಯಾಗಿರುವ ಲೆಫ್ಟಿನೆಂಟ್ ಜನರಲ್ ಡಿ. ಅಂಬು ಅವರ ಉತ್ತರಾಧಿಕಾರಿಯಾಗಿರಲಿದ್ದಾರೆ. ಸೇನಾ ಸಿಬ್ಬಂದಿಯ ಉಪ ವರಿಷ್ಠನ ಹುದ್ದೆ ಸ್ವೀಕರಿಸುವ ಮುನ್ನ ನಾರಾವನೆ ಸೇನೆಯ ಈಸ್ಟರ್ನ್ ಕಮಾಂಡ್‌ನ ಮುಖ್ಯಸ್ಥರಾಗಿದ್ದರು. ನಾರಾವನೆ ಅವರು 37 ವರ್ಷದ ತನ್ನ ಸೇವಾವಧಿಯಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದರು.