×
Ad

ಝಾಕಿರ್ ಉಳ್ಳಾಲ್ ಬಂಧನ ವಿರೋಧಿಸಿ ಆಯೋಜಿಸಿದ್ದ ಪ್ರತಿಭಟನೆ ರದ್ದು

Update: 2019-09-02 20:35 IST

ಮಂಗಳೂರು: ಮಾನವ ಹಕ್ಕು, ಸಾಮಾಜಿಕ ಹೋರಾಟಗಾರ ಝಾಕಿರ್ ಉಳ್ಳಾಲ್ ಬಂಧನದ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲ ವಲಯದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಗಣೇಶ ಚತುರ್ಥಿ ಪ್ರಯುಕ್ತ ರದ್ದು ಗೊಂಡಿದೆ.

ಈ ಸಂದರ್ಭ ಎಸ್ ಡಿಪಿಐ ಮುಖಂಡರು ಪ್ರತಿಭಟನೆ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ನಡೆಸಿ ಪ್ರತಿಭಟನೆ ನಡೆಸದಂತೆ ತಡೆ ಹಿಡಿಯಲಾಯಿತು.

ಇದರಿಂದ ಕೆಲವು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಝಾಕೀರ್ ಉಳ್ಳಾಲ ಬಂಧನ ವಿರೋಧಿಸಿ ಉಳ್ಳಾಲ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಎಸ್ ಡಿಪಿಐ ಪ್ರತಿಭಟನೆ ಹಮ್ಮಿಕೊಂಡಿತ್ತು.

ನ್ಯಾಯಕ್ಕಾಗಿ ಹೋರಾಟ ಇದೆ

ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕು ಇದೆ. ಇದನ್ನು ಯಾವುದೇ ಕಾರಣ ನೀಡಿ ಪೊಲೀಸರು ತಡೆಗಟ್ಟುವುದು ಸರಿಯಲ್ಲ. ಝಾಕೀರ್ ಉಳ್ಳಾಲಗೆ ನ್ಯಾಯ ಸಿಗಬೇಕು‌. ಅದಕ್ಕಾಗಿ ನಮ್ಮ ಹೋರಾಟ ಖಂಡಿತಾ ಇದೆ

- ನಿಝಾಂ ಉಳ್ಳಾಲ, ಉಳ್ಳಾಲ ನಗರ ಎಸ್ ಡಿಪಿಐ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News