×
Ad

ಚೌತಿ ಶೋಭಾಯಾತ್ರೆ: ಜ್ಯೂಸ್ ಹಂಚಿ ಸೌಹಾರ್ದ ಮೆರೆದ ವ್ಯಾಪಾರಿ ಇಸ್ಮಾಯೀಲ್

Update: 2019-09-03 10:05 IST

ಮಂಗಳೂರು, ಸೆ.3: ನಗರದ ಆಕಾಶ ಭವನದಲ್ಲಿ ಸಡಗರ ಸಂಭ್ರಮದಿಂದ ಚೌತಿಯನ್ನು ಆಚರಿಸಲಾಯಿತು.

ಈ ಸಂದರ್ಭ ಜರುಗಿದ ಶೋಭಾಯಾತ್ರೆಯಲ್ಲಿ ಸಾಗಿದವರಿಗೆ ತಂಪು ಪಾನೀಯ ವಿತರಿಸುವ ಮೂಲಕ ಸ್ಥಳೀಯ ವ್ಯಾಪಾರಿ ಇಸ್ಮಾಯೀಲ್ ಮತೀಯ ಸೌಹಾರ್ದಕ್ಕೆ ಸಾಕ್ಷಿಯಾದರು. ಮೆರವಣಿಗೆಯಲ್ಲಿ ಆಗಮಿಸಿದ ಸಾವಿರಾರು ಮಂದಿಗೆ ಜ್ಯೂಸ್ ಹಾಗೂ ಮಜ್ಜಿಗೆ ಹಂಚಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಕಳೆದ ಕೆಲವು ವರ್ಷಗಳಿಂದ ಇಸ್ಮಾಯೀಲ್ ಈ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆಕಾಶ ಭವನ ಪರಿಸರದಲ್ಲಿ ಅವರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News