×
Ad

ಉಡುಪಿ: ಶಾಲಾ ಮಕ್ಕಳ ಸಾಗಾಟದ ಆಟೋ ರಿಕ್ಷಾ ಪಲ್ಟಿ; 8 ಮಂದಿಗೆ ಗಾಯ

Update: 2019-09-03 12:30 IST

ಉಡುಪಿ, ಸೆ.3: ಶಾಲಾ ಮಕ್ಕಳ ಸಾಗಾಟದ ಆಟೊ ರಿಕ್ಷಾ ಉರುಳಿಬಿದ್ದ ಪರಿಣಾಮ ಎಂಟು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಇಂದು ಬೆಳಗ್ಗೆ ಇಂದ್ರಾಳಿ ಬಳಿ ನಡೆದಿದೆ.

ಮಣಿಪಾಲ ಶಾಂತಿನಗರದಿಂದ ಕಡಿಯಾಳಿ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರಿಕ್ಷಾದ ಎದುರಿನಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರ  ಏಕಾಏಕಿ ಬ್ರೇಕ್ ಹಾಕಿದನೆನ್ನಲಾಗಿದೆ. ಈ ವೇಳೆ ಬೈಕಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು  ಆಟೋರಿಕ್ಷಾ ಚಾಲಕ ಒಮ್ಮೆಲೆ  ಬ್ರೇಕ್ ಹಾಕಿದ್ದರಿಂದ ನಿಯಂತ್ರಣ ತಪ್ಪಿದ ರಿಕ್ಷಾ ಮಗುಚಿ ಬಿದ್ದಿದೆ ಎಂದು ಹೇಳಲಾಗಿದೆ. ಇದರಿಂದ ರಿಕ್ಷಾದಲ್ಲಿದ್ದ 8 ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News