ಚುನಾವಣಾ ಅಫಿದಾವಿತ್ ನಲ್ಲಿ ಫೋರ್ಜರಿ ಆರೋಪ: ಮಾಜಿ ಸಿಎಂ ಪುತ್ರನ ಬಂಧನ
Update: 2019-09-03 12:59 IST
ಹೊಸದಿಲ್ಲಿ, ಸೆ.3: ಛತ್ತೀಸ್ ಗಢದ ಮಾಜಿ ಸಿಎಂ ಅಜಿತ್ ಜೋಗಿಯವರ ಪುತ್ರ, ಮಾಜಿ ಶಾಸಕ ಅಮಿತ್ ಜೋಗಿಯವರನ್ನು ವಂಚನೆ ಪ್ರಕರಣದಲ್ಲಿ ಇಂದು ಬಂಧಿಸಲಾಗಿದೆ. ತನ್ನ ಜನ್ಮಸ್ಥಳದ ಬಗ್ಗೆ ಅವರು ಚುನಾವಣಾ ಅಫಿದಾವಿತ್ ನಲ್ಲಿ ಸುಳ್ಳು ಹೇಳಿದ್ದರು ಎಂದು ಆರೋಪಿಸಲಾಗಿದೆ.
ಅಮಿತ್ ಜೋಗಿಯವರನ್ನು ಅವರ ಬಿಲಾಸ್ಪುರ್ ನಲ್ಲಿರುವ ಮನೆಯಿಂದ ಬಂಧಿಸಲಾಯಿತು.
ಅಮಿತ್ ಜೋಗಿ ವಿರುದ್ಧ 2013ರ ಮರ್ವಾಹಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಬಿಜೆಪಿ ನಾಯಕಿ ಸಮೀರಾ ಪೈಕ್ರಾ ದೂರು ನೀಡಿದ್ದರು. ಜೋಗಿ ತನ್ನ ಜನ್ಮಸ್ಥಳ ಹಾಗು ಜಾತಿಯ ಬಗ್ಗೆ ಸುಳ್ಳು ಹೇಳಿದ್ದರು ಎಂದು ಆಕೆ ಆರೋಪಿಸಿದ್ದರು.