727 ಅಂಕಗಳಷ್ಟು ಕುಸಿದ ಷೇರು ಮಾರುಕಟ್ಟೆ

Update: 2019-09-03 10:51 GMT

ಹೊಸದಿಲ್ಲಿ: ದೇಶದ ಜಿಡಿಪಿ ಕಳೆದ ಆರು ವರ್ಷಗಳಲ್ಲಿಯೇ ಕನಿಷ್ಠ ಶೇ. 5ಕ್ಕೆ ಕುಸಿದಿರುವ ಬಗ್ಗೆ ಸರಕಾರಿ ಅಂಕಿ ಅಂಶ ಕಳೆದ ಶುಕ್ರವಾರ ಹೊರಬಿದ್ದ ಬೆನ್ನಲ್ಲೇ  ಇಂದು ಅಪರಾಹ್ನದ ಹೊತ್ತಿಗೆ ಸೆನ್ಸೆಕ್ಸ್ 727 ಅಂಕಗಳಷ್ಟು ಕುಸಿದರೆ ನಿಫ್ಟಿ 50 ಸೂಚ್ಯಂಕ ಶೇ 1.9 ಅಥವಾ 206 ಅಂಕಗಳಷ್ಟು ಕುಸಿದು 10,817 ತಲುಪಿದೆ.

ದೇಶದ ಆರ್ಥಿಕತೆಯ ನಿಧಾನಗತಿಯ ಪ್ರಗತಿ, ಆಟೋಮೊಬೈಲ್ ಕ್ಷೇತ್ರದಲ್ಲಿ ಲಕ್ಷಗಟ್ಟಲೆ ಉದ್ಯೋಗ ನಷ್ಟ, ಚೀನಾ-ಅಮೆರಿಕಾ ನಡುವೆ ವ್ಯಾಪಾರ ಯುದ್ಧ, ಹೀಗೆ ಹಲವು ಕಾರಣಗಳಿಂದಾಗಿ ದೇಶದ ಆರ್ಥಿಕತೆಯ ಚಿತ್ರಣ ನಿರಾಶಾದಾಯಕವಾಗಿರುವುದು ಷೇರು ಮಾರುಕಟ್ಟೆ ಸೂಚ್ಯಂಕಗಳ ಕುಸಿತಕ್ಕೆ ಕಾರಣವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News