ಕುದ್ದುಪದವಿನಲ್ಲಿ ರಕ್ತದಾನ ಶಿಬಿರ
ಬಂಟ್ವಾಳ, ಸೆ. 3: ಕುದ್ದುಪದವು ಖುವ್ವತುಲ್ ಇಸ್ಲಾಂ ಮದ್ರಸಾದಲ್ಲಿ ರಹ್ಮಾ ರಿಲೀಫ್ ಸೆಲ್ ಅಡ್ಯನಡ್ಕ ಮತ್ತು ಲೈಫ್ ಲೈನ್ ಪೌಂಡೇಶನ್ ಆಶ್ರಯದಲ್ಲಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಹಾಗೂ ದೇರಳಕಟ್ಟೆ ಯೆನೆಪೆÇೀಯ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ಕುದ್ದುಪದವಿನಲ್ಲಿ ನಡೆಯಿತು.
ಕುದ್ದುಪದವು ಮಲ್‍ಹರ್ ಮಸೀದಿ ಅಧ್ಯಕ್ಷ ಮುನೀರ್ ಆಝ್ಹರಿ ಶಿಬಿರವನ್ನು ಉದ್ಘಾಟಿಸಿದರು.
ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ, ಗ್ರಾಪಂ ಸದಸ್ಯ ಅಬ್ದುಲ್ ಕರೀಮ್ ಕುದ್ದುಪದವು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೈಪ್ ಲೈನ್ ಫೌಂಡೇಶನ್ ಶರೀಫ್ ಮೂಸಾ ಕುದ್ದುಪದವು ವಹಿಸಿದ್ದರು. ಸುಮಾರು 40 ಮಂದಿ ರಕ್ತದಾನ ಮಾಡಿದರು.
ಅಡ್ಯನಡ್ಕ ರಹ್ಮಾನಿಯಾ ಜುಮ್ಮಾ ಮಸೀದಿಯ ಮದರ್ರಿಸ್ ಅಬ್ದುಲ್ಲಾ ರಹ್ಮಾನಿ, ಮರಕ್ಕಿಣಿ ಬದ್ರ್ ಹುಸೈನ್ ಜುಮಾ ಮಸೀದಿ ಮುದರ್ರಿಸಿ ನೌಫಲ್ ಫೈಝಿ, ಎಸ್‍ಡಿಪಿಐ ಕ್ಷೇತ್ರ ಸಮಿತಿ ಸದಸ್ಯ ಶಾಕಿರ್ ಅಳಿಕೆಮಜಲು, ಲೈಫ್‍ಲೈನ್ ಫೌಂಡೇಶನ್ ಯು ಎಇ ಪ್ರತಿನಿಧಿ ಹನೀಫ್ ಅರಿಯಮೂಲೆ, ಬ್ಲಡ್ ಹೆಲ್ಫ್ ಕೇರ್ ಕರ್ನಾಟಕದ ಗೌರವಾಧ್ಯಕ್ಷ ನಝೀರ್ ಹುಸೈನ್, ಕುದ್ದುಪದವು ಖುವ್ವತುಲ್ ಇಸ್ಲಾಂ ಮದ್ರಸ್ ಅಧ್ಯಾಪಕ ಶಾಜಹಾನ್ ಅಝ್ಹರಿ, ಅಡ್ಯನಡ್ಕ ರಹ್ಮಾ ರಿಲೀಫ್ ಸೆಲ್ ಕನ್ವೀನರ್ ಅಬ್ದುಲ್ ಹಮೀದ್ ಹಾಜಿ, ಹಮೀದ್ ಕಂದಕ್ ಮತ್ತಿತರರು ಉಪಸ್ಥಿತರಿದ್ದರು.
ಆದಂ ಝಿಯಾದ್ ಸ್ವಾಗತಿಸಿದರು. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಸತ್ತಾರ್ ಪ್ರಸ್ತಾವಿಸಿಸರು. ಸಫ್ವಾನ್ ಕಾರ್ಯಕ್ರಮ ನಿರೂಪಿಸಿದರು.