ಬ್ಯಾಂಕ್‌ಗಳ ಮಹಾವಿಲೀನದಿಂದ ಶಾಖೆಗಳ ಮುಚ್ಚುಗಡೆ, ಉದ್ಯೋಗ ಕಡಿತ
Update: 2019-09-03 20:06 IST
ಉಡುಪಿ, ಸೆ.3: ಕೇಂದ್ರ ಸರಕಾರದ ಬ್ಯಾಂಕುಗಳ ಮಹಾ ವಿಲೀನ ಪ್ರಕ್ರಿಯೆ ಯಿಂದ ಹಲವು ಶಾಖೆಗಳು ಮುಚ್ಚಲ್ಪಟ್ಟು, ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಮತ್ತು ಅಧಿಕಾರಿಗಳ ಸಂಯುಕ್ತ ವೇದಿಕೆಯ ಮಾಜಿ ಸಂಚಾಲಕ ಯು.ಶಿವರಾಯ ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಬ್ಯಾಂಕುಗಳು ಪೈಪೋಟಿ ನಡೆಸಲು ವಿಲೀನಗೊಳಿಸಿದರೆ, ಕೃಷಿ, ಸಣ್ಣ ಕೈಗಾರಿಕೆಗಳಿಗೆ ಸಾಲ ಹರಿದು ಬರುವುದು ಕಡಿಮೆ ಯಾಗುತ್ತದೆ. ಇದು ಆರ್ಥಿಕ ರಂಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದವರು ನುಡಿದಿದ್ದಾರೆ.