ಕಳಂಕಿತ ನಾಯಕರಿಂದ ಪಕ್ಷಕ್ಕೆ ಹಾನಿ: ಬಿಜೆಪಿಗೆ ಅಣ್ಣಾ ಹಝಾರೆ ಎಚ್ಚರಿಕೆ

Update: 2019-09-03 14:36 GMT

  ಹೊಸದಿಲ್ಲಿ, ಸೆ.3: ಇತರ ಪಕ್ಷಗಳ ಕಳಂಕಿತ ನಾಯಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವುದರಿಂದ ಬಿಜೆಪಿಗೆ ಭಾರೀ ಹಾನಿಯಾಗಬಹುದು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆ ಎಚ್ಚರಿಸಿದ್ದಾರೆ.

ತಮ್ಮ ತಪ್ಪು ಕಾರ್ಯವನ್ನು ಮುಚ್ಚಿಹಾಕಲು ಕಳಂಕಿತ ನಾಯಕರು ಯಾವಾಗಲೂ ಆಡಳಿತ ಪಕ್ಷದ ಆಶ್ರಯದಡಿ ಬರುತ್ತಾರೆ. ಇತ್ತೀಚೆಗೆ ಘಾರ್ಕುಲ್ ವಸತಿ ಹಗರಣದ ಪ್ರಮುಖ ಆರೋಪಿ ಶಿವಸೇನೆಯ ಸುರೇಶ್ ಜೈನ್ ಇದಕ್ಕೆ ಉತ್ತಮ ಉದಾಹರಣೆ. ಬಹುಕೋಟಿ ಹಗರಣದ ಆರೋಪಿಯಾಗಿರುವ ಜೈನ್ ಮೂರು ಬಾರಿ ಪಕ್ಷ ಬದಲಿಸಿದವರು. ಆದ್ದರಿಂದಲೇ ಇನ್ನೂ ಅವರ ವಿರುದ್ಧ ಯಾವುದೇ ಕ್ರಮ ಜರಗಿಸಿಲ್ಲ ಎಂದು ಹಝಾರೆ ಹೇಳಿದರು.

ಇಂತಹ ನಾಯಕರು ರಾಜಕೀಯದಲ್ಲಿರಲು ಮತದಾರರೇ ಕಾರಣ. ಅವರು ಮತ ಚಲಾಯಿಸಿದ್ದರಿಂದ ಇಂತಹ ಕಳಂಕಿತರು ಮತ್ತೆ ಮತ್ತೆ ಗೆದ್ದು ಬರುತ್ತಾರೆ. ಈಗ ಯುವಜನತೆ ಕಳಂಕಿತ ನಾಯಕರು ಹಾಗೂ ಇಂತವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಪಕ್ಷಗಳಿಗೆ ಸರಿಯಾದ ಬುದ್ಧಿ ಕಲಿಸಬೇಕು. ಜನರ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡುವ ಅಭ್ಯರ್ಥಿಗಳ ಗೆಲುವನ್ನು ಜನರು ಖಾತರಿಗೊಳಿಸಬೇಕು ಎಂದವರು ಹೇಳಿದ್ದಾರೆ.

  ಮಹಾರಾಷ್ಟ್ರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿಯ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News