ಉಡುಪಿ ಜಿಲ್ಲಾ ಮಟ್ಟದ ಮಟ್ಟದ ಭಕ್ತಿ ಸಂಗೀತ ಸ್ಪರ್ಧಾ ವಿಜೇತರು

Update: 2019-09-03 14:40 GMT

ಕಟಪಾಡಿ, ಸೆ.3: ಕಟಪಾಡಿಯ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಜೆಸಿಐ ಕಟಪಾಡಿ ನಡೆಸಿದ ಉಡುಪಿ ಜಿಲ್ಲಾ ಮಟ್ಟದ ಭಕ್ತಿ ಸಂಗೀತ ಸ್ಪರ್ಧೆಯ ಪ್ರೌಢ ಶಾಲಾ ವಿಭಾಗದಲ್ಲಿ ಹಿರಿಯಡ್ಕ ಗ್ರೀನ್‌ಪಾರ್ಕ್ ಸೆಂಟ್ರಲ್ ಸ್ಕೂಲ್‌ನ ರಕ್ಷಿತ್ ಆರ್ ಭಟ್ ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾನೆ.

ಸ್ಪರ್ಧೆಯ ಬಹುಮಾನ ವಿಜೇತರ ವಿವರ ಹೀಗಿದೆ. ಕಿರಿಯ ಪ್ರಾಥಮಿಕ ವಿಭಾಗ: ಪ್ರಥಮ-ಸಾನ್ವಿ ಬಿ ಬಲ್ಲಾಳ್, ಮುಕುಂದ ಕೃಪಾ ಆಂಗ್ಲ ಮಾಧ್ಯಮ ಶಾಲೆ ಉಡುಪಿ, ದ್ವಿತೀಯ-ಸಾನ್ವಿ ಎಂ. ಸುವರ್ಣ, ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ, ತೃತೀಯ- ಬಿ.ಆರಾದನಾ ಭಟ್, ಎಸ್.ಎಸ್. ಆಂಗ್ಲ ಮಾಧ್ಯಮ ಶಾಲೆ ಕಟಪಾಡಿ, ಸಮಾಧಾನಕರ ಬಹುಮಾನ- ಪ್ರಾರ್ಥನಾ, ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಅಲೆವೂರು, ಆದಿತ್ಯ ಭಟ್, ಎಸ್ ಎಸ್ ಆಂಗ್ಲಮಾಧ್ಯಮ ಶಾಲೆ ಕಟಪಾಡಿ, ಸಂಪ್ರೀತಿ, ಮುಕುಂದಕೃಪಾ ಆಂಗ್ಲಮಾಧ್ಯಮ ಶಾಲೆ ಉಡುಪಿ.

ಹಿರಿಯ ಪ್ರಾಥಮಿಕ ವಿಭಾಗ: ಪ್ರಥಮ-ಅಮೃತಾ ಜಿ, ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆ ಮಣಿಪಾಲ, ದ್ವಿತೀಯ-ಪ್ರತ್ಯುಷ, ಆನಂದತೀರ್ಥ ವಿದ್ಯಾಲಯ ಕುಂಜಾರುಗಿರಿ, ತೃತೀಯ- ಶಗುನ್ ಎಸ್ ಶೆಟ್ಟಿ, ಸೈಂಟ್ ಸಿಸಿಲಿಸ್ ಆಂಗ್ಲ ಮಾಧ್ಯಮ ಶಾಲೆ ಉಡುಪಿ, ಸಮಾಧಾನಕರ ಬಹುಮಾನ- ಸ್ತುತಿ ಪಿ ಶೆಟ್ಟಿ, ಸೈಂಟ್ ಸಿಸಿಲಿಸ್ ಆಂಗ್ಲ ಮಾಧ್ಯಮ ಶಾಲೆ ಉಡುಪಿ, ಸ್ಪೂರ್ತಿ, ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಉದ್ಯಾವರ.

ಪ್ರೌಢಶಾಲಾ ವಿಭಾಗ: ಪ್ರಥಮ-ರಕ್ಷಿತ್ ಆರ್ ಭಟ್, ಗ್ರೀನ್‌ಪಾರ್ಕ್ ಸೆಂಟ್ರಲ್ ಸ್ಕೂಲ್ ಹಿರಿಯಡಕ, ದ್ವಿತೀಯ- ಚಿತ್ಕಲ ಎಚ್, ಬಿಎಮ್ ಆಂಗ್ಲ ಮಾಧ್ಯಮ ಶಾಲೆ ಪರ್ಕಳ, ತೃತೀಯ- ಸಿಂಚನಾ ಎಲ್ ಭಟ್, ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ಹಿರಿಯಡಕ, ಸಮಾಧಾನಕರ ಬಹುಮಾನ- ಮನೀಷ್ ಡಿ ರಾವ್, ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ, ಧೀರಜ್‌ಶ್ರೀ ಆನಂದ ಶೆಟ್ಟಿ ಸರಕಾರಿ ಪ್ರೌಢ ಶಾಲೆ ಕಣಜಾರು ಕಾರ್ಕಳ ತಾಲೂಕು.

ಭಕ್ತಿಸಂಗೀತ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ಕಟಪಾಡಿಯ ಗಣೇಶೋತ್ಸವ ವೇದಿಕೆಯಲ್ಲಿ ನೆರವೇರಿತು. ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ರವೀಂದ್ರನಾಥ ಶೆಟ್ಟಿ, ಅಧ್ಯಕ್ಷ ದಯಾನಂದ ಶೆಟ್ಟಿ, ಪ್ರ. ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್, ಜೆಸಿಐ ಅಧ್ಯಕ್ಷ ಗಂಗಾಧರ ಕಾಂಚನ್, ಕಾರ್ಯಕ್ರಮ ಸಂಯೋಜಕ ಕೃಷ್ಣಕುಮಾರ್ ರಾವ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಘವೇಂದ್ರ ರಾವ್ ಬಹುಮಾನಿತರ ಪಟ್ಟಿ ವಾಚಿಸಿದರು. ಶಂಕರ ಸಾಲ್ಯಾನ್ ವಂದಿಸಿದರು. ಸುಕುಮಾರ್ ಅಂಬಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News