×
Ad

‘ಮ್ಯಾನ್ ಬೂಕರ್’ ಪ್ರಶಸ್ತಿ ಯ ಸಂಭಾವ್ಯರ ಪಟ್ಟಿಯಲ್ಲಿ ಸಲ್ಮಾನ್ ರಶ್ದಿ

Update: 2019-09-03 20:23 IST

ಲಂಡನ್, ಸೆ. 3: 2019ರ ಸಾಲಿನ ‘ಮ್ಯಾನ್ ಬೂಕರ್ ಪ್ರಶಸ್ತಿ’ಯ ಸಂಭಾವ್ಯರ ಕಿರು ಪಟ್ಟಿಗೆ ಸಲ್ಮಾನ್ ರಶ್ದಿಯವರ ಹೊಸ ಪುಸ್ತಕ ‘ಕ್ವಿಚೋಟ್’ ಆಯ್ಕೆಯಾಗಿದೆ. ಅವರ ‘ಮಿಡ್‌ನೈಟ್ಸ್ ಚಿಲ್ಡ್ರನ್’ ಕೃತಿಗೆ 1981ರ ಪ್ರಶಸ್ತಿ ಲಭಿಸಿತ್ತು.

 ಸಂಭಾವ್ಯರ ಕಿರುಪಟ್ಟಿಯಲ್ಲಿ ಇತರ ಐದು ಮಂದಿ ಸಾಹಿತಿಗಳಿದ್ದಾರೆ. ಅವರೆಂದರೆ: ಕೆನಡದ ಮಾರ್ಗರೆಟ್ ಆ್ಯಟ್ವುಡ್ (ಪುಸ್ತಕದ ಹೆಸರು: ದ ಟೆಸ್ಟಾಮೆಂಟ್ಸ್), ಬ್ರಿಟನ್/ಅಮೆರಿಕದ ಲೂಸಿ ಎಲಿಮನ್ (ಡಕ್ಸ್, ನ್ಯೂಬರಿಪೋರ್ಟ್), ಬ್ರಿಟನ್‌ನ ಬರ್ನಾರ್ಡಿನ್ ಎವರಿಸ್ಟೊ (ಗರ್ಲ್, ವುಮನ್, ಅದರ್), ನೈಜೀರಿಯದ ಚಿಗೋಝೀ ಒಬಿಯೋಮ (ಆ್ಯನ್ ಆರ್ಕೆಸ್ಟ್ರಾ ಆಫ್ ಮೈನಾರಿಟೀಸ್) ಮತ್ತು ಟರ್ಕಿ/ಬ್ರಿಟನ್‌ನ ಎಲಿಫ್ ಶಫಕ್ (10 ಮಿನಿಟ್ಸ್ 38 ಸೆಕಂಡ್ಸ್ ಇನ್ ದಿಸ್ ಸ್ಟ್ರೇಂಜ್ ವರ್ಲ್ಡ್).

2019ರ ಪ್ರಶಸ್ತಿ ವಿಜೇತರನ್ನು ಅಕ್ಟೋಬರ್ 14ರಂದು ಲಂಡನ್‌ನ ಗಿಲ್ಡ್‌ಹಾಲ್‌ನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಘೋಷಿಸಲಾಗುವುದು ಹಾಗೂ ಅದನ್ನು ಬಿಬಿಸಿ ನೇರಪ್ರಸಾರ ಮಾಡಲಿದೆ.

ಕಿರುಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಎಲ್ಲ ಲೇಖಕರು ತಲಾ 2,500 ಪೌಂಡ್ (ಸುಮಾರು 2.17 ಲಕ್ಷ ರೂಪಾಯಿ) ಮೊತ್ತವನ್ನು ಸ್ವೀಕರಿಸುತ್ತಾರೆ. ಪ್ರಶಸ್ತಿ ವಿಜೇತರು ಇದಕ್ಕೆ ಹೆಚ್ಚುವರಿಯಾಗಿ 50,000 ಪೌಂಡ್ (ಸುಮಾರು 43.5 ಲಕ್ಷ ರೂಪಾಯಿ) ಪ್ರಶಸ್ತಿ ಮೊತ್ತವನ್ನು ಪಡೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News