×
Ad

ಐಡಿಬಿಐ ಬ್ಯಾಂಕಿಗೆ 9,000 ಕೋ.ರೂ. ಬಂಡವಾಳ ಪ್ಯಾಕೇಜ್‌ಗೆ ಸಂಪುಟ ಅಸ್ತು

Update: 2019-09-03 21:48 IST

ಹೊಸದಿಲ್ಲಿ,ಸೆ.3: ಐಡಿಬಿಐ ಬ್ಯಾಂಕಿನ ಬಂಡವಾಳ ಮೂಲವನ್ನು ಹೆಚ್ಚಿಸಲು 9,000 ಕೋ.ರೂ.ಗಳ ಮರುಬಂಡವಾಳೀಕರಣ ಪ್ರಸ್ತಾವಕ್ಕೆ ಕೇಂದ್ರ ಸಂಪುಟವು ಮಂಗಳವಾರ ಹಸಿರು ನಿಶಾನೆ ತೋರಿಸಿದೆ.

ಸರಕಾರ ಮತ್ತು ಎಲ್‌ಐಸಿ ಒಂದು ಬಾರಿಯ ಈ ಮರುಬಂಡವಾಳೀಕರಣಕ್ಕೆ ಹಣವನ್ನು ನೀಡಲಿವೆ ಎಂದು ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಅವರು ತಿಳಿಸಿದರು.

ಈ ಪೈಕಿ 4,557 ಕೋ.ರೂ.ಗಳನ್ನು ಸರಕಾರ ಮತ್ತು ಎಲ್‌ಐಸಿ 4,700 ಕೋ.ರೂ.ಗಳನ್ನು ಒದಗಿಸಲಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News