ಸೆ.12ರಂದು ಎಸ್‌ಸಿ,ಎಸ್‌ಟಿ ಅಭ್ಯರ್ಥಿಗಳಿಗೆ ಆರೋಗ್ಯ ಮೇಳ
ಉಡುಪಿ, ಸೆ.3: ಎಸ್‌ಸಿಪಿ- ಟಿಎಸ್‌ಪಿ ಅನುದಾನದಡಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 800 ಹಾಸಿಗೆಯುಳ್ಳ ಎನ್‌ಎ ಬಿಎಚ್ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಕನಿಷ್ಠ ಶೇ.75 ಹುದ್ದೆಗಳನ್ನು ಮೀಸಲಿರಿ ಸುವ ಭರವಸೆ ಮೇರೆಗೆ ಕೌಶಲ್ಯ ಅಭ್ಯರ್ಥಿ ಅಭಿವೃದ್ಧಿ ತರಬೇತಿಗೆ ಆಯ್ಕೆ ಮಾಡಲು ಆರೋಗ್ಯ ಮೇಳವನ್ನು ಸೆ.12ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 5.30ರವರೆಗೆ ಅಜ್ಜರಕಾಡು ಪುರಭವನದಲ್ಲಿ ಆಯೋಜಿಸಲಾಗಿದೆ.
ಈ ಮೇಳದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಅನುಭವಿಯಾಗಿರುವ ಬೆಂಗಳೂರಿನ ಆಸ್ಪತ್ರೆಗಳು ಭಾಗವಹಿಸಲಿವೆ. ಉಡುಪಿ ಜಿಲ್ಲೆಗೆ ವಿವಿಧ ಹುದ್ದೆಗಳು ಸೇರಿದಂತೆ ಒಟ್ಟು 123 ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. ಪಿಯುಸಿ ವಿಜ್ಞಾನ ಅಥವಾ ಪದವಿ ಅಥವಾ ಜಿಎನ್‌ಎಂ/ ಬಿಎಸ್‌ಸಿ ನರ್ಸಿಂಗ್ ಪಾಸಾದವರು ಹಾಗೂ 18ರಿಂದ 35ವರ್ಷ ವಯೋ ಮಿತಿಯವರು ಈ ಮೇಳದಲ್ಲಿ ಪಾಲ್ಗೊಳ್ಳಬಹುದು.
ಇದರಲ್ಲಿ ಶೇ.50ರಷ್ಟು ಮಹಿಳೆಯರಿಗೆ ಮೀಸರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶೋಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.