ಮಂಗಳೂರು: ಗಣೇಶೋತ್ಸವ ರಸಮಂಜರಿಯಲ್ಲಿ ಹಾಡುತ್ತಿದ್ದ ಗಾಯಕ ಕುಸಿದು ಬಿದ್ದು ಮೃತ್ಯು
Update: 2019-09-03 22:26 IST
ಮಂಗಳೂರು, ಸೆ. 3: ಗಣೇಶೋತ್ಸವ ಪ್ರಯುಕ್ತ ನಡೆಯುತ್ತಿದ್ದ ಶೋಭಾಯಾತ್ರೆಯ ರಸಮಂಜರಿ ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾ ಕಲಾವಿದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಕೊಂಕಣಿ ಸಿಂಗರ್, ಸಂಗೀತ ಸಂಯೋಜಕ ಜೆರಿ ಮೃತಪಟ್ಟವರು.
ಬಿಜೈ ಸಮೀಪದ ಪಿಂಟೋ ಲೇನ್ ಬಳಿ ಈ ಘಟನೆ ನಡೆದಿದೆ. ಹಾಡು ಹಾಡುತ್ತಿರುವಾಗಲೇ ಕುಸಿದು ಬಿದ್ದ ಕಲಾವಿದನನ್ನು ಕದ್ರಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವಾಗ ಮೃತಪಟ್ಟಿದ್ದಾರೆ.