ಉಡುಪಿ: ಇಂದಿನಿಂದ ಬ್ಯಾಡ್ಮಿಂಟನ್ ಟೂರ್ನಿ
Update: 2019-09-03 22:29 IST
ಉಡುಪಿ, ಸೆ.3: ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿ ಯಿಂದ ನಾಳೆಯಿಂದ ಸೆ.9ರವರೆಗೆ ಆರು ದಿನಗಳ ಕಾಲ ಉಡುಪಿ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಚಾಂಪಿ ಯನ್‌ಷಿಪ್ ಯುನೆಸ್ಸ್ ಸ್ಟೇಟ್ ಚಾಂಪಿಯನ್‌ಷಿಪ್ ನಡೆಯಲಿದೆ.
ಸ್ಪರ್ಧೆಗಳು 19 ವರ್ಷದೊಳಗಿನ ಪುರುಷರು, ಮಹಿಳೆಯರು ಹಾಗೂ ಮುಕ್ತ ಪುರುಷರು, ಮಹಿಳೆಯರು ಹಾಗೂ 45 ವರ್ಷ ಮೇಲ್ಪಟ್ಟ ಹಿರಿಯರಿಗೆ ನಡೆಯಲಿದೆ. ಒಟ್ಟು 15 ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದ್ದು, ರಾಜ್ಯದಾದ್ಯಂತದಿಂದ ಸುಮಾರು 500ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವ ಹಿಸುವ ನಿರೀಕ್ಷೆ ಇದೆ ಎಂದು ಯುಡಿಬಿಎ ಅಧ್ಯಕ್ಷ ಕೆ.ರಘುಪತಿ ಭಟ್ ಹಾಗೂ ಪ್ರಧಾನ ಕಾರ್ಯದರ್ಶಿ ವೈ.ಸುಧೀರ್ ಕುಮಾರ್ ತಿಳಿಸಿದ್ದಾರೆ.