ಉಡುಪಿ: ಯಕ್ಷಗಾನ ಕೇಂದ್ರಕ್ಕೆ ಇಂಗ್ಲೆಂಡ್ ವಿದ್ಯಾರ್ಥಿಗಳ ಭೇಟಿ
Update: 2019-09-03 22:30 IST
ಉಡುಪಿ, ಸೆ.3: ಇಂಗ್ಲೆಂಡಿನ ಲ್ಯಾಂಕ್‌ಶೈರ್‌ನ 15 ಮಂದಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಶಿಬಿರದ ಅಂಗವಾಗಿ ಮಣಿಪಾಲ ಅಕಾಡೆಮಿ ಅಪ್ ಹೈಯರ್ ಎಜ್ಯುಕೇಶನ್ ಸಹಯೋಗದೊಂದಿಗೆ ಇಂದ್ರಾಳಿಯಲ್ಲಿರುವ ಯಕ್ಷ ಗಾನ ಕೇಂದ್ರಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರದ ಸಂಯೋಜಕ ಪ್ರೊ.ವರದೇಶ್ ಹೀರೆಗಂಗೆ ಕೇಂದ್ರದ ಬಗ್ಗೆ ಹಾಗೂ ಕೇಂದ್ರದ ಚಟುವಟಿಕೆಗಳ ಕುರಿತು ಪರಿಚಯ ಮಾಡಿಕೊಟ್ಟರು. ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರದ ವಿದ್ಯಾರ್ಥಿ ಗಳಿಂದ ಯಕ್ಷಗಾನದ ಪ್ರಾತ್ಯಕ್ಷಿಕೆ ಮತ್ತು ಕೇಂದ್ರದ ಕಲಾವಿದರಿಂದ ಗುರು ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದಲ್ಲಿ ’ಜಟಾಯು ಮೋಕ್ಷ’ ಯಕ್ಷಗಾನ ನಡೆಯಿತು.