×
Ad

ಮಂಗಳೂರು: ಸೆ. 6ರಂದು ಶ್ರೀನಿವಾಸ್‌ನಲ್ಲಿ ತಿರುಓಣಂ

Update: 2019-09-04 17:37 IST

ಮಂಗಳೂರು, ಸೆ.4: ಶ್ರೀನಿವಾಸ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಶ್ರೀನಿವಾಸ ವಿಶ್ವವಿದ್ಯಾನಿಲಯ ಕಾಲೇಜ್ ಆಫ್ ಹೋಟೆಲ್ ಮ್ಯಾನೆಜ್‌ಮೆಂಟ್ ಮತ್ತು ಟೂರಿಸಂನ ಆಡಳಿತ ಮಂಡಳಿ, ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳಿಂದ ಓಣಂ ಹಬ್ಬ ಸೆ.6ರಂದು ಮಧ್ಯಾಹ್ನ 12 ಗಂಟೆಗೆ ಪಾಂಡೇಶ್ವರ ಶ್ರೀನಿವಾಸ ವಿಶ್ವವಿದ್ಯಾನಿಲಯ ಸಿಟಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಅಂದು ಓಣಂ - ಸದ್ಯ, ಸಾಂಪ್ರದಾಯಿಕ ಊಟೋಪಚಾರ, ಚಿಂಗಾರಿ ಮೇಳ, ಪೂಕಳಂ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ವಿಭಾಗದ ಮುಖ್ಯಸ್ಥ ಶ್ರೀಜಿತ್ ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಓಣಂ ಪೂರ್ವಭಾಗಿಯಾಗಿ ಅಂತರ ಕಾಲೇಜು ಹೂ- ರಂಗೋಲಿ ಸ್ಪರ್ಧೆ ಪೂಕಳಂ - 2019 ಬುಧವಾರ ಏರ್ಪಡಿಸಿದ್ದು, ವಿಜೇತರಿಗೆ ಸೆ.6ರಂದು ಬಹುಮಾನ ವಿತರಿಸಲಾಗುವುದು ಎಂದು ಅವರು ಹೇಳಿದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಕ್ಷಿತ್ ಎಸ್. ಪೂಜಾರಿ, ಕಾರ್ಯದರ್ಶಿ ಶ್ರೀರಾಗ್ ಎಂ.ವಿ., ಕಾಲೇಜಿನ ಕ್ಯಾಟರಿಂಗ್ ವಿಭಾಗದ ಬಾಣಸಿಗರಾದ ತಿಲಕ್ ಶೆಟ್ಟಿಘಿ, ರಾಹುಲ್ ಎ.ಜಿ. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News