ಶ್ರೀನಗರ: ಪೆಲೆಟ್ ಗುಂಡಿನ ದಾಳಿಯಿಂದ ವಿದ್ಯಾರ್ಥಿ ಮೃತ್ಯು; ಆರೋಪ

Update: 2019-09-04 14:53 GMT

ಶ್ರೀನಗರ, ಸೆ. 4: ಜಮ್ಮು ಹಾಗೂ ಕಾಶ್ಮೀರದಲ್ಲಿ ಕಳೆದ ತಿಂಗಳು ನಡೆದ ಪ್ರತಿಭಟನೆ ಸಂದರ್ಭ ಗಾಯಗೊಂಡ ಕಾಶ್ಮೀರಿ ಯುವಕ ಶ್ರೀನಗರದ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಶ್ಮೀರದ ವಿವಿಧ ಭಾಗಗಳಲ್ಲಿ ನಿರ್ಬಂಧ ಮರು ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರಕಾರ ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ರದ್ದುಗೊಳಿಸಿದ ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಆಗಸ್ಟ್ 6 ಹಾಗೂ 7ರಂದು ಸೌರಾದಲ್ಲಿ ಗುಂಪೊಂದು ನಡೆಸಿದ ಪ್ರತಿಭಟನೆಯಲ್ಲಿ ಇಲ್ಲಾಹಿಬಾಗ್‌ನ ನಿವಾಸಿ 18 ವರ್ಷದ ಅರ್ಸಾರ್ ಅಹ್ಮದ್ ಖಾನ್ ಪಾಲ್ಗೊಂಡಿದ್ದ.

ಈ ಮೆರವಣಿಗೆ ಸಂದರ್ಭ ಭದ್ರತಾ ಪಡೆ ಹಾರಿಸಿದ ಪೆಲೆಟ್ ಗುಂಡಿನಿಂದ 11ನೇ ತರಗತಿ ವಿದ್ಯಾರ್ಥಿಯಾಗಿದ್ದ ಅರ್ಸಾರ್ ಅಹ್ಮದ್ ಖಾನ್‌ನ ಕಣ್ಣಿಗೆ ಗಾಯವಾಗಿತ್ತು. ಆತನನ್ನು ಶೇರ್-ಎ-ಕಾಶ್ಮೀರ್ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಒಂದು ತಿಂಗಳ ಬಳಿಕ ಆತ ಮೃತಪಟ್ಟಿದ್ದಾನೆ.

ಬಾಲಕನ ಮೃತದೇಹನ್ನು ಶ್ರೀನಗರದ ಇಲ್ಲಾಹ್ ಬಾಗ್ ಪ್ರದೇಶದಲ್ಲಿರುವ ಮನೆಗೆ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಲಾಗಿದೆ.

ಆದರೆ, ಬಾಲಕನ ಸಾವಿಗೆ ಪೆಲೆಟ್ ಗುಂಡು ಕಾರಣ ಎಂಬ ಆರೋಪವನ್ನು ಸೇನೆ ತಿರಸ್ಕರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ದಿಲ್ಲೋನ್, 30 ದಿನಗಳಳ್ಲಿ 5 ಮಂದಿ ಮೃತಪಟ್ಟಿದ್ದಾರೆ. ಆದರೆ, ಒಬ್ಬನೇ ಒಬ್ಬನ ಸಾವಿಗೆ ನಾವು ಕಾರಣರಲ್ಲ. ಕೆಲವರು ಕಲ್ಲು ತೂರಾಟದಲ್ಲಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಇನ್ನು ಕೆಲವರು ಕದನ ವಿರಾಮ ಉಲ್ಲಂಘನೆಯಿಂದ ಮೃತಪಟ್ಟಿದ್ದಾರೆೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News