‘ಅಮೇಝಾನ್ ಪ್ರೈಮ್’ ‘ನೆಟ್ ಫ್ಲಿಕ್ಸ್’ ಶೋಗಳಿಗೂ ಸೆನ್ಸಾರ್ ಗೆ ಮುಂದಾದ ಸರಕಾರ?

Update: 2019-09-04 16:49 GMT
Photo: www.netflix.com

ಹೊಸದಿಲ್ಲಿ, ಸೆ.4: ಆನ್ ಲೈನ್ ಸ್ಟ್ರೀಮಿಂಗ್ ಪ್ಲ್ಯಾಟ್ ಫಾರ್ಮ್ ಗಳಾದ ‘ನೆಟ್ ಫ್ಲಿಕ್ಸ್’, ‘ಅಮೆಝಾನ್ ಪ್ರೈಮ್’ನಂತಹ ಒಟಿಟಿ (ಓವರ್ ದ ಟಾಪ್ ಮೀಡಿಯಾ ಸರ್ವಿಸಸ್)ಗಳಿಗೆ ಸೆನ್ಸಾರ್ ಮಾಡಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಒಟಿಟಿ ಪ್ಲ್ಯಾಟ್ ಫಾರ್ಮ್ ಗಳ ಪ್ರತಿನಿಧಿಗಳು, ನಾಗರಿಕ ಸಮಾಜದ, ತಾಂತ್ರಿಕ ವರ್ಗದ, ಮಾಧ್ಯಮದ ಸದಸ್ಯರ ಹಾಗು ಕಾನೂನು ತಜ್ಞರ ಜೊತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಉನ್ನತ ಅಧಿಕಾರಿಗಳು ಶೀಘ್ರ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಸದ್ಯಕ್ಕೆ ಆನ್ ಲೈನ್ ಪ್ಲಾಟ್ ಫಾರ್ಮ್ ಗಳಲ್ಲಿ ಪ್ರಸಾರವಾಗುವ ಶೋಗಳಿಗಾಗಲೀ, ಅವುಗಳು ಭಾರತದಲ್ಲಿ ನಿರ್ಮಿಸುವ ಚಿತ್ರಗಳಿಗಾಗಲೀ ಸಿಬಿಎಫ್ ಸಿಯ ಪ್ರಮಾಣಪತ್ರದ ಅಗತ್ಯವಿಲ್ಲ.

ಹಾಟ್ ಸ್ಟಾರ್, ವೂಟ್, ಝೀ5, ಸೋನಿಲೈವ್, ಆಲ್ಟ್ ಬಾಲಾಜಿ, ನೆಟ್ ಫ್ಲಿಕ್ಸ್ ಮುಂತಾದ ಫ್ಲಾಟ್ ಫಾರ್ಮ್ ಗಳೊಂದಿಗೆ ಸಚಿವಾಲಯವು ಚರ್ಚಿಸುವ ಸಾಧ್ಯತೆಯಿದೆ.

ನೆಟ್ ಫ್ಲಿಕ್ಸ್ ವೆಬ್ ಸೀರಿಸ್ ‘ಲೈಲಾ’ ವಿರುದ್ಧ ಸಂಘಪರಿವಾರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಹಾಗು ‘ಲೈಲಾ’ ಶೋ ಹಿಂದುತ್ವ ಮತ್ತು ಅದರ ಚಿಹ್ನೆಗಳನ್ನು ಅವಮಾನಿಸಿದೆ ಎಂದು ಆರೋಪಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಆದರೆ ಈ ಬಗ್ಗೆ ಸಚಿವಾಲಯವು ಇನ್ನಷ್ಟೇ ಪ್ರತಿಕ್ರಿಯಿಸಿಬೇಕಿದೆ. ಒಂದು ವೇಳೆ ಆನ್ ಲೈನ್ ಸ್ಟ್ರೀಮಿಂಗ್ ಶೋಗಳಿಗೆ ಸೆನ್ಸಾರ್ ಶಿಪ್ ಗೆ ಸರಕಾರ ಮುಂದಾದರೆ ಭಾರೀ ಆಕ್ರೋಶ ವ್ಯಕ್ತವಾಗಬಹುದಾದ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News