ಭಟಕಳ ಅರ್ಬನ್ ಬ್ಯಾಂಕ್, ಸಿಬ್ಬಂದಿಗಳಿಂದ ನೆರೆ ಸಂತ್ರಸ್ತರಿಗೆ ನೆರವು

Update: 2019-09-04 17:13 GMT

ಭಟ್ಕಳ: ರಾಜ್ಯದಲ್ಲಿ ಭೀಕರ ನೆರೆಯಿಂದ ನೊಂದ ಸಂತ್ರಸ್ತರಿಗೆ ರಾಜ್ಯದ ಪ್ರತಿಷ್ಟಿತ ಅರ್ಬನ್ ಬ್ಯಾಂಕುಗಳಲ್ಲಿ ಒಂದಾದ ಭಟಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂದಾಯವಾಗುವಂತೆ ರೂ.2,94,754/- ಆರ್ಥಿಕ ನೆರವು ನೀಡಲಾಯಿತು.     

ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ್ ಚೌಗುಲೆ ಹಾಗೂ ಉಪಾಧ್ಯಕ್ಷ  ಶೇಖ್ ಶಬ್ಬೀರ್ ಕಾದಿರ ಬಾಷಾ ಷರೀಫ್ ಇವರ ನೇತೃತ್ವದಲ್ಲಿ ನಿರ್ದೇಶಕರುಗಳಾದ ಅಬ್ದುಲ್ ಖಾಲಿಕ್ ಸೌದಾಗರ್, ಶ್ರೀಧರ ನಾಯ್ಕ, ಝುಬೈರ್ ಕೋಲಾ, ವಿಕ್ಟರ್ ಗೋಮ್ಸ್, ಬ್ಯಾಂಕಿನ ಪ್ರಧಾನ ಕಾರ್ಯನಿರ್ವಾಹಕ  ಸುಭಾಷ ಎಮ್. ಶೆಟ್ಟಿ, ಸಹಾಯಕ ಪ್ರಧಾನ ಕಾರ್ಯನಿರ್ವಾಹಕ ಶ್ರೀ ಶಂಭು ಹೆಗಡೆ ಇವರು ಬ್ಯಾಂಕಿನ ವತಿಯಿಂದ ಮಂಜೂರಾದ ರೂ.1,00,000/- ಹಾಗೂ ಬ್ಯಾಂಕಿನ ಸಿಬ್ಬಂದಿಗಳ ಒಂದು ದಿನದ ವೇತನದಿಂದ ಸಂಗ್ರಹವಾದ ಮೊತ್ತ ರೂ.1,94,754/- ನ್ನು ಮುಖ್ಯಮಂತ್ರಿ ಪರಿಹಾರ ನಿಧಿಯ ಹೆಸರಿನಲ್ಲಿ ನೀಡಿದ ಡಿಮಾಂಡ್ ಡ್ರಾಫ್ಟ್ ನ್ನು ತಹಶೀಲ್ದಾರ್  ರಿಗೆ ಹಸ್ತಾಂತರಿಸಿದರು. 

ಈ ಬ್ಯಾಂಕ್ ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾ ಬಂದಿದ್ದು, ಈಗ ನೆರೆಯಿಂದ ನೊಂದ ಕುಟುಂಬಸ್ಥರಿಗೆ ಸಹಾಯ ಹಸ್ತ ಚಾಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News