ರೋಗಿಗಳ ಆರೈಕೆ ಪ್ರೀತಿ, ವಾತ್ಸಲ್ಯದಿಂದ ಕೂಡಿರಲಿ: ಡಾ. ದಾನೇಶ್ ಕುಮಾರ್

Update: 2019-09-04 17:24 GMT

ಕೊಣಾಜೆ : ಪಿ.ಎ. ಫಿಸಿಯೋಥೆರಪಿ ಕಾಲೇಜು ಮಂಗಳೂರು ಇದರ ಪ್ರಥಮ ವರ್ಷದ ತರಗತಿಗಳ ಉದ್ಘಾಟನಾ ಕಾರ್ಯಕ್ರಮವು ಪಿ.ಎ.ಕಾಲೇಜಿನಲ್ಲಿ ನಡೆಯಿತು.

ನಿಟ್ಟೆ ಇನ್ಸಿಟ್ಯೂಟ್ ಆಫ್ ಪಿಸಿಯೋಥೆರಪಿಯ ಪ್ರಾಂಶುಪಾಲರಾದ ಡಾ. ದಾನೇಶ್ ಕುಮಾರ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಪಿಸಿಯೋಥೆರಪಿಸ್ಟ್ ಗಳು ತಮ್ಮ ವೃತ್ತಿಯನ್ನು ಬದ್ಧತೆಯೊಂದಿಗೆ ಮಾಡುತ್ತಾ, ಪ್ರೀತಿ ಮತ್ತು ವಾತ್ಸಲ್ಯದೊಂದಿಗೆ ರೋಗಿಗಳ ಆರೈಕೆ ಮಾಡಿದಾಗ ಉತ್ತಮ ಫಲಿತಾಂಶ ಸಿಗುವುದಾಗಿ ಅಭಿಪ್ರಾಯ ಪಟ್ಟರು.

ಪಿ. ಎ. ಎಜುಕೇಶನ್ ಟ್ರಸ್ಟ್ ನ ಶೈಕ್ಷಣಿಕ ನಿರ್ದೇಶಕರಾದ ಡಾ. ಸರ್ಫ್‍ರಾಝ್ ಜೆ.  ಹಾಸಿಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಯಶಸ್ಸಿನ ಸಲಹೆಗಳನ್ನು ನೀಡಿದರು.

ಪಿ.ಎ. ಎಜುಕೇಶನಲ್ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕರಾದ  ಅಬ್ದುಲ್ ಇಬ್ರಾಹಿಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪಿ.ಎ. ತಾಂತ್ರಿಕ ಕಾಲೇಜು ಪ್ರಾಂಶುಪಾಲ ಡಾ. ಅಬ್ದುಲ್ ಶರೀಫ್,  ಉಪಪ್ರಾಂಶುಪಾಲ ಡಾ. ರಮೀಝ್, ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ಡಾ. ಸಲೀಮುಲ್ಲಾ ಖಾನ್, ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಝೋಹರಾ ಅಬ್ಬಾಸ್, ಎಂಬಿಎ ವಿಭಾಗದ ಡಾ. ಲತಾ ಕೃಷ್ಣಣ್ ಉಪಸ್ಥಿತರಿದ್ದರು. 

ಪ್ರೊ. ಝಿಶಾನ್ ಖಿರಾತ್ ಪಠಿಸಿದರು, ಪಿ.ಎ. ಪಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಪ್ರೊ. ಶಾಹಿದ್‍ ದಾರ್ ಸ್ವಾಗತಿಸಿ, ಪ್ರೊ. ಆಯಿಶಾ ವಂದಿಸಿದರು. ಪ್ರೊ. ಅಜೀತ್‍ ವಾಸು ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News