ನೆಚ್ಚಿನ ಅಧ್ಯಾಪಕಿಗೆ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಿದ ಪ್ರಿಯಾಂಕಾ ಗಾಂಧಿ

Update: 2019-09-05 17:09 GMT

ಹೊಸದಿಲ್ಲಿ, ಸೆ. 5: ‘ಶಿಕ್ಷಕರ ದಿನಾಚರಣೆ’ಯ ದಿನವಾದ ಗುರುವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತನ್ನ ನೆಚ್ಚಿನ ಅಧ್ಯಾಪಕಿ ಮೇ ಲಾಲ್ ಅವರನ್ನು ಸ್ಮರಿಸಿದ್ದಾರೆ. ಅವರಿಗೆ ಭಾವನಾತ್ಮಕವಾಗಿ ಶ್ರದ್ಧಾಂಜಲಿ ಸಲ್ಲಿಸಿರುವ ಪ್ರಿಯಾಂಕಾ, ತನ್ನ ನೆಚ್ಚಿನ ಅಧ್ಯಾಪಕನ ಗುಣಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ.

‘‘ಪ್ರತಿ ಶಿಕ್ಷಕರ ದಿನಾಚರಣೆಯಲ್ಲೂ ನಾನು ನನ್ನ ನೆಚ್ಚಿನ ಅಧ್ಯಾಪಕಿ ಮೇ ಲಾಲ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ದುಃಖ ಮತ್ತು ಸಾಮರಸ್ಯದ ಪ್ರಯಾಣದಲ್ಲಿ ಅವರು ಗೆಳತಿ ಹಾಗೂ ಒಡನಾಡಿಯಾಗಿದ್ದರು. ಅವರು ತಮ್ಮ ಪುತ್ರಿಯನ್ನು ಕಳೆದುಕೊಂಡಿದ್ದರು. ಆದರೆ, ಎಂದಿಗೂ ಕರುಣೆ ಹಾಗೂ ಮಾನವೀಯತೆ ಕಳೆದುಕೊಳ್ಳಲಿಲ್ಲ’’ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಹೋದರ ರಾಹುಲ್ ಗಾಂಧಿ ಕೂಡ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಸಾಮಾಜಿಕ ಮಾಧ್ಯಮದ ಟ್ರೋಲ್, ‘‘ಕಾರ್ಯಸೂಚಿ ಹೊಂದಿರುವ ಪತ್ರಕರ್ತರು’’ ಹಾಗೂ ತನ್ನ ಸುದೃಢನನ್ನಾಗಿ ಮಾಡಿದ ರಾಜಕೀಯ ಸಲಹೆಗಾರರಿಗೆ ವಂದನೆ ಸಲ್ಲಿಸಿದ್ದಾರೆ. ಶಿಕ್ಷಕರ ದಿನಾಚರಣೆಯಾದ ಇಂದು ಎಲ್ಲ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಶುಭ ಕೋರುತ್ತೇನೆ. ನಮ್ಮ ಅಧ್ಯಾಪಕರು ನಿಜವಾದ ದೇಶ ನಿರ್ಮಾಣಕಾರರು. ಯಾಕೆಂದರೆ, ನಮ್ಮ ದೇಶದ ಭವಿಷ್ಯವನ್ನು ರೂಪಿಸುವ, ಪ್ರಾಮಾಣಿಕವಾಗಿ ಸರಿಯಾದ ದಾರಿ ತೋರಿಸುವ ಪ್ರಮುಖ ಜವಾಬ್ದಾರಿ ಅವರಿಗೆ ಇದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News