×
Ad

ವೆಬ್ ಆಧಾರಿತ ಕಲಿಕೆ ಪ್ರದರ್ಶನ ಮತ್ತು ಕಾರ್ಯಾಗಾರ

Update: 2019-09-05 22:51 IST

ಮಂಗಳೂರು: ಮನೆಲ್ ಶ್ರೀನಿವಾಸ್ ನಾಯಕ್ ಸ್ಮಾರಕ ಬೆಸೆಂಟ್ ಇನ್ಸ್ಟಿಟ್ಯೂಟ್ ಆಫ್ ಪಿಜಿ ಸ್ಟಡೀಸ್ 31 ನೇ ಆಗಸ್ಟ್ 2019 ರ ಶನಿವಾರದಂದು ನ್ಯಾಷನಲ್ ಪ್ರೋಗ್ರಾಂ ಆನ್ ಟೆಕ್ನಾಲಜಿ ಏನ್‍ಹನ್ಸಡ್ ಲರ್ನಿಂಗ್ (ಎನ್‍ಪಿಟಿಇಎಲ್) ಮೂಲಕ ವೆಬ್ ಆಧಾರಿತ ಕಲಿಕೆ ಕುರಿತು ನೇರ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಆಯೋಜಿಸಿತು.

ಕಲಿಕೆ ನಿರಂತರ ಪ್ರಕ್ರಿಯೆ ಮತ್ತು ಬೋಧನಾ ವೃತ್ತಿಗೆ ಅನಿವಾರ್ಯವಾಗಿದೆ. ಆದ್ದರಿಂದ ಎಂಎಚ್‍ಆರ್‍ಡಿಯ ಕಾರ್ಯಕ್ರಮಗಳಾದ ಸ್ವಯಂ/ ಎನ್‍ಪಿಟಿಇಎಲ್‍ಗೆ ಸೇರ್ಪಡೆಗೊಳ್ಳುವ ಮೂಲಕ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಶಿಕ್ಷಕರು ತಮ್ಮನ್ನು ನವೀಕೃತವಾಗಿರಿಸಿಕೊಳ್ಳುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.

ಕಾರ್ಯಾಗಾರದ ಗುರಿ ಗುಂಪು ಪದವಿ ಕಾಲೇಜುಗಳ ಅಧ್ಯಾಪಕರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಾಗಿತ್ತು. ಕಾರ್ಯಾಗಾರಕ್ಕೆ ನೋಂದಾಯಿಸಿದ 14 ಸಂಸ್ಥೆಗಳಿಗೆ ಸೇರಿದ 41 ಪ್ರತಿನಿಧಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು. ಮಂಗಳೂರಿನ ಬೋಂದೆಲ್‍ನಲ್ಲಿರುವ ಎಂಎಸ್‍ಎನ್‍ಎಂ ಬೆಸೆಂಟ್ ವಿದ್ಯಾ ಕೇಂದ್ರ ಕ್ಯಾಂಪಸ್‍ನಲ್ಲಿರುವ ಸ್ವರ್ಣ ಹಾಲ್‍ನಲ್ಲಿ ಆಯೋಜಿಸಿದ್ದರು.

ಎನ್‍ಪಿಟಿಇಎಲ್‍ನ ಲಾಂಛನವನ್ನು ಕ್ಲಿಕ್ ಮಾಡುವ ಮೂಲಕ ಕಾರ್ಯಾಗಾರವನ್ನು ಸಂಸ್ಥೆಯ ನಿರ್ದೇಶಕಿ ಡಾ. ಮೊಲ್ಲಿ ಎಸ್. ಚೌಧುರಿ ಉದ್ಘಾಟಿಸಿದರು. ಸಂಸ್ಥೆಯ ಡೀನ್ ಡಾ. ವಿಷ್ಣು ಪ್ರಸನ್ನ ಕೆ.ಎನ್. ಅವರಿಂದ ಎನ್‍ಪಿಟಿಇಎಲ್‍ನ ಪ್ರದರ್ಶನದೊಂದಿಗೆ ಕಾರ್ಯಾಗಾರವು ಮುಂದುವರಿಯಿತು.

ಪ್ರದರ್ಶನದ ನಂತರ, ಎನ್‍ಪಿಟಿಇಎಲ್‍ನಲ್ಲಿ ಪ್ರಾಯೋಗಿಕ ಅಧಿವೇಶನ ನಡೆಯಿತು. ಸಂಸ್ಥೆಯ ಕಂಪ್ಯೂಟರ್ ಲ್ಯಾಬ್‍ನಲ್ಲಿ ಪ್ರತಿನಿಧಿಗಳಿಗೆ ಪ್ರಾಯೋಗಿಕ ಅನುಭವವನ್ನು ನೀಡಲಾಯಿತು. ಶ್ರೀಮತಿ ರೀಮಾ ಆಗ್ನೆಸ್ ಫ್ರಾಂಕ್, ಸಹಾಯಕ ಪ್ರೊಫೆಸರ್ ಅಧಿವೇಶನದ ನೇತೃತ್ವ ವಹಿಸಿದ್ದರು.

ಕಾರ್ಯಾಗಾರವು ಸಹಾಯಕ ಪ್ರೊಫೆಸರ್. ಶ್ರೀಮತಿ ಚಂದ್ರಿಕಾ ರಾವ್ ಅವರ ವೋಟ್ ಆಫ್ ಥ್ಯಾಂಕ್ಸ್‍ನೊಂದಿಗೆ ಕೊನೆಗೊಂಡಿತು. ಶ್ರೀಮತಿ ವರ್ಷಾ ಡಿ.ಪಿ., ಸಹಾಯಕ ಪ್ರೊಫೆಸರ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಶ್ರೀಮತಿ ಆಶಲಥಾ ಕಾರ್ಯಕ್ರಮದ ಸಂಯೋಜಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News