ಎಚ್‍ಐವಿ ಪೀಡಿತ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿದ ಅಶೋಕ್ ಕುಮಾರ್ ರೈ
ಉಪ್ಪಿನಂಗಡಿ: ರೈ ಎಸ್ಟೇಟ್ ಆ್ಯಂಡ್ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್‍ನ ಮುಖ್ಯ ಪ್ರವರ್ತಕ ಅಶೋಕ್ ಕುಮಾರ್ ರೈ ಅವರು ತನ್ನ ಹುಟ್ಟುಹಬ್ಬವನ್ನು ಎಚ್‍ಐವಿ ಪೀಡಿತ ಮಕ್ಕಳು ಹಾಗೂ ವಿಶಿಷ್ಟ ಚೇತನರೊಂದಿಗೆ ಆಚರಿಸಿದರು.
ಉದ್ಯಮಿ ಅಶೋಕ್ ಕುಮಾರ್ ರೈ ಅವರು ಮಂಗಳೂರಿನ ಸಾಂತ್ವಾನದ ಎಚ್‍ಐವಿ ಪೀಡಿತ ಮಕ್ಕಳೊಂದಿಗೆ ಹಾಗೂ ಪುತ್ತೂರಿನ ಬನ್ನೂರಿನಲ್ಲಿರುವ ಪ್ರಜ್ಞಾ ಬುದ್ಧಿಮಾಂದ್ಯ ಆಶ್ರಮದಲ್ಲಿ ತನ್ನ ಕುಟುಂಬಿಕರು ಹಾಗೂ ಸ್ನೇಹಿತರ ಜೊತೆಗೂಡಿ ಹುಟ್ಟುಹಬ್ಬವನ್ನು ಆಚರಿಸಿದರು.
ಈ ಸಂದರ್ಭ ಅಶೋಕ್ ಕುಮಾರ್ ರೈ, ಅವರ ಪತ್ನಿ ಸುಮಾ ಎ. ರೈ, ಮಕ್ಕಳಾದ ರಿಧಿ ರೈ, ಪ್ರದೀಲ್ ರೈ, ಶ್ರಿಧಿ ರೈ, ಅಭಿಮಾನಿ ಬಳಗದ ಪ್ರಜ್ವಲ್ ರೈ ಸವಣೂರು, ಕಿಶೋರ್, ಧನು ಪಟ್ಲ, ಕಮಲ್ ಕುಲಾಲ್, ಸಬಿತ್, ರಕ್ಷಿತ್, ದೇವರಾಜ ಸಿಂಹವನ, ಸುಜಿತ್ ಬಂಗೇರ ಸಂಟ್ಯಾರ್, ರಾಧಾಕೃಷ್ಣ, ಇಬ್ರಾಹೀಂ ಕಲ್ಲೇಗ, ಸಂಪ್ರೀತ್, ಪ್ರಕಾಶ್ ಪಡುಮಲೆ, ಮನೋಜ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.