ಜೈಲಿಗೆ ಹೋಗುವ ಮುನ್ನ ಚಿದಂಬರಂ ಕೋರ್ಟ್ ಗೆ ಮಾಡಿದ ಮನವಿಯೇನು ಗೊತ್ತಾ?

Update: 2019-09-05 17:59 GMT

ಸೆ.5: ಸದ್ಯ ಸಿಬಿಐ ವಿಶೇಷ ನ್ಯಾಯಾಲಯದಿಂದ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ದಕ್ಷಿಣ ಏಶ್ಯಾದ ಅತೀದೊಡ್ಡ ಕಾರಾಗೃಹ ತಿಹಾರ್ ಜೈಲಿನ 7ನೇ ಸಂಖ್ಯೆಯ ಕೊಠಡಿಯಲ್ಲಿ ಇಡಲಾಗಿದೆ.

ಜೈಲಿಗೆ ಸಾಗಿಸುವ ಮೊದಲು ಚಿದಂಬರಮ್ ತನಗೆ ಕೆಲವೊಂದು ಸವಲತ್ತುಗಳನ್ನು ಒದಗಿಸಬೇಕು ಎಂದು ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮೊದಲನೆಯದಾಗಿ ತನ್ನ ಔಷಧಿ ಮತ್ತು ಕನ್ನಡಕವನ್ನು ಕೊಂಡೊಯ್ಯಲು ಅನುಮತಿ ನೀಡಬೇಕು ಎಂದು ಕೋರಿರುವ ಮಾಜಿ ವಿತ್ತ ಸಚಿವ ಅವುಗಳ ಜೊತೆಗೆ ಜೈಲಿನಲ್ಲಿ ಮಲಗಲು ಹಾಸಿಗೆ, ಪಾಶ್ಚಾತ್ಯ ಟಾಯ್ಲೆಟ್ ಅನ್ನೂ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ತನಗೆ ಝಡ್ ಶ್ರೇಣಿಯ ಭದ್ರತೆ ಇರುವುದನ್ನು ಪರಿಗಣಿಸಿ ಜೈಲಿನಲ್ಲೂ ತನಗೆ ಪ್ರತ್ಯೇಕ ಕೊಠಡಿ ಮತ್ತು ಸಾಕಷ್ಟು ಭದ್ರತೆಯನ್ನು ಒದಗಿಸುವಂತೆ ಜೈಲಧಿಕಾರಿಗಳಿಗೆ ಸೂಚಿಸಬೇಕು ಎಂದು ಚಿದಂಬರಂ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ತಿಹಾರ್ ಜೈಲಿನ ಪ್ರಧಾನ ನಿರ್ದೇಶಕ ಸಂದೀಪ್ ಗೋಯಲ್, ಕಾಂಗ್ರೆಸ್‌ನ ಹಿರಿಯ ನಾಯಕನಿಗೆ ಪ್ರತ್ಯೇಕ ಕೊಠಡಿ ನೀಡಲಾಗುವುದು ಮತ್ತು ತಿನ್ನಲು ರೋಟಿ, ಸಾಂಬಾರ್ ಮತ್ತು ಪಲ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News