ಜೆಎನ್ ಯು ಪ್ರಕರಣದಲ್ಲಿ ದೇಶದ್ರೋಹ ಕೃತ್ಯವಾಗಿಲ್ಲ: ದಿಲ್ಲಿ ಸರಕಾರ

Update: 2019-09-06 06:08 GMT

ಹೊಸದಿಲ್ಲಿ, ಸೆ.6: ದೇಶದ್ರೋಹದ ಆರೋಪ ಎದುರಿಸುತ್ತಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಹಾಗೂ ಇತರ ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ದಿಲ್ಲಿ ಪೊಲೀಸರು ಮಾಡಿರುವ ಮನವಿಯನ್ನು ದಿಲ್ಲಿ ಸರಕಾರ ತಿರಸ್ಕರಿಸಲು ನಿರ್ಧರಿಸಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ಮೂಲಗಳು ತಿಳಿಸಿವೆ.

2016ರ ಫೆಬ್ರವರಿ 9ರಂದು ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರೋಪಿಗಳ ನಡವಳಿಕೆಯು ರಾಜ್ಯದ ವಿರುದ್ಧ ದೇಶದ್ರೋಹಕ್ಕೆ ಸಮನಾಗಿಲ್ಲ. ಈ ಪ್ರಕರಣ ಸೆ.18ರಂದು ನಗರದ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ ಎಂದು ಗೃಹ ಇಲಾಖೆ ಅಭಿಪ್ರಾಯಪಟ್ಟಿದೆ.
ಗೃಹ ಇಲಾಖೆಯ ಪ್ರಕಾರ ದಾಖಲೆಯಲ್ಲಿರುವ ವಸ್ತುಗಳ ದೃಷ್ಟಿಯಿಂದ ಎಫ್‌ಐಆರ್‌‘‘ರಾಜ್ಯದ ವಿರುದ್ಧ ದೇಶದ್ರೋಹ ಹಾಗೂ ಹಿಂಸಾಚಾರವನ್ನು ಪ್ರಚೋದಿಸುವ ಮೂಲಕ ರಾಷ್ಟ್ರದ ಸಾರ್ವಭೌಮತ್ವದ ಮೇಲಿನ ಆಕ್ರಮಣಕ್ಕೆ ಸಮನಾಗಿಲ್ಲ ಮತ್ತು ಐಪಿಸಿ ಸೆಕ್ಷನ್ 124ಎ ಅಡಿಯಲ್ಲಿ ಕ್ರಮ ಜರುಗಿಸಲು ಯಾವುದೇ ಪ್ರಕರಣವಿಲ್ಲ. 10 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಮಾಡಲಾಗಿದೆ. ಹೀಗಾಗಿ 196 ಸಿಆರ್‌ಪಿಸಿ ಅನುಮೋದನೆ ಅನಗತ್ಯ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರಿಗೆ ಲಭ್ಯವಿರುವ ವಸ್ತುಗಳ ಪರಿಶೀಲನೆಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ದಿಲ್ಲಿ ಸರಕಾರದ ವಕ್ತಾರರು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News