ಮಹಿಳೆಯರಿಗೆ ದಿಲ್ಲಿ ಮೆಟ್ರೋದಲ್ಲಿ ಉಚಿತ ಯಾನ: ಸುಪ್ರೀಂಕೋರ್ಟ್ ಆಕ್ಷೇಪ

Update: 2019-09-06 17:07 GMT

   ಹೊಸದಿಲ್ಲಿ, ಸೆ.4: ದಿಲ್ಲಿ ಮೆಟ್ರೋದ ನಾಲ್ಕನೆ ಹಂತದ ವಿಸ್ತರಣೆಗಾಗಿ, ಕೇಂದ್ರ ಸರಕಾರವು ಮೆಟ್ರೋದ ನಿರ್ವಹಣಾ ನಷ್ಟದ ಶೇ.50ರಷ್ಟನ್ನು ಭರಿಸಬೇಕೆಂಬ ಅರವಿಂದ ಕೇಜ್ರಿವಾಲ್ ಸರಕಾರದ ಮನವಿಯನ್ನು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾದ ಅರುಣ್ ಮಿಶ್ರಾ ಹಾಗೂ ಅರುಣ್ ಗುಪ್ತಾ ತಿರಸ್ಕರಿಸಿದ್ದಾರೆ. ರಿಯಾಯಿತಿ ಕೊಡುಗೆಗಳು ಹಾಗೂ ನಷ್ಟದ ಘೋಷಣೆ ಇವೆರಡೂ ಒಂದಕ್ಕೊಂದು ಹೊಂದಿಕೊಳ್ಳಲಾರದು ಎಂದು ನ್ಯಾಯಪೀಠ ಅಭಿಪ್ರಾಯಿಸಿದೆ. ಮಹಿಳೆಯರಿಗೆ ದಿಲ್ಲಿ ಮೆಟ್ರೋದಲ್ಲಿ ಉಚಿತ ಪ್ರಯಾಣಕ್ಕೆ ಕೇಜ್ರಿವಾಲ್ ಸರಕಾರ ಅವಕಾಶ ನೀಡಿರುವುದು ಸಮಸ್ಯೆಯನ್ನು ಸೃಷ್ಟಿಸಿದೆಯೆಂದು ಅದು ಹೇಳಿದೆ.

 ಒಂದೆಡೆ ದಿಲ್ಲಿ ಸರಕಾರವು ಮೆಟ್ರೋ ರೈಲ್ವೆಯಲ್ಲಿ ರಿಯಾಯಿತಿ ಕೊಡುಗೆಗಳನ್ನು ವಿಸ್ತರಿಸುತ್ತಿದ್ದರೆ, ಇನ್ನೊಂದೆಡೆ ಕೇಂದ್ರ ಸರಕಾರವು ಶೇ.50ರಷ್ಟು ನಿರ್ವಹಣಾ ನಷ್ಟವನ್ನು ಭರಿಸಬೇಕೆಂದು ಹೇಳುತ್ತಿದೆ. ನೀವು ಉಚಿತವಾಗಿ ಮೆಟ್ರೋದಲ್ಲಿ ಪ್ರಯಾಣಿಸಲು ಜನರಿಗೆ (ಮಹಿಳೆಯರು) ಅವಕಾಶ ನೀಡಿದಲ್ಲಿ, ಇಲ್ಲವೇ ಬೇರೆ ರೀತಿಯ ಉಚಿತ ಸವಲತ್ತುಗಳನ್ನು ನೀಡುತ್ತಿದರೆ ಅರಿಂದ ಸಮಸ್ಯೆಯೇ ಆಗಲಿದೆ ಎಂದು ನ್ಯಾಯಪೀಠ ತಿಳಿಸಿತು.

ಮೆಟ್ರೋ ರೈಲ್ವೆ ಯಾನಕ್ಕೆ ನೀಡಲಾಗುತ್ತಿರುವ ಎಲ್ಲಾ ರೀತಿಯ ರಿಯಾಯಿತಿಗಳನ್ನು ಕೂಡಲೇ ನಿಲ್ಲಿಸಬೇಕೆಂದು ಅರುಣ್ ಮಿಶ್ರಾ ದಿಲ್ಲಿಯ ಎಎಪಿ ಸರಕಾರಕ್ಕೆ ತಿಳಿಸಿದರು. ಮೆಟ್ರೋ ರೈಲ್ವೆ ರಾಜ್ಯ ಸರಕಾರದ ವ್ಯಾಪ್ತಿಗೆ ಬರುತ್ತದೆ. ಒಂದು ವೇಳೆ ಮೆಟ್ರೋ ನಷ್ಟದಲ್ಲಿ ನಡೆಯುತ್ತಿದ್ದರೆ ಅದರ ನಿರ್ವಹಣಾ ವೆಚ್ಚವನ್ನು ರಾಜ್ಯವೇ ಭರಿಸಬೇಕಾಗಿದೆ. ಆದರೆ ಮೆಟ್ರೊದ ನಿರ್ವಹಣೆಯಲ್ಲಿ ಅಥವಾ ಅದನ್ನು ನಡೆಸುವಲ್ಲಿ ಯಾವುದೇ ನಷ್ಟವಾಗದಂತೆ ರಾಜ್ಯ ಸರಕಾರ ಖಾತರಿಪಡಿಸಬೇರಕಾಗಿದೆಯೆಂದು ನ್ಯಾಯಪೀಠತಿಳಿಸಿತು.

  ಆದರೆ ಮೆಟ್ರೊ ವಿಸ್ತರಣೆಗೆ ತಗಲು 193.94 ಕಿ.ಮೀ. ವಿಸ್ತೀರ್ಣದ ಯೋಜನೆಗಾಗಿನ ಭೂನಿವೇಶನದ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಭರಿಸಬೇಕೆಂದು ಕೇಂದ್ರ ಹಾಗೂ ದಿಲ್ಲಿ ಸರಕಾರಕ್ಕೆ ನ್ಯಾಯಾಲಯವು ಆದೇಶಿಸಿದೆ. ನಾಲ್ಕನೆ ಹಂತದ ಮೆಟ್ರೋ ವಿಸ್ತರಣಾ ಕಾಮಗಾರಿಯನ್ನು ಯಾವುದೇ ವಿಳಂಬವಿಲ್ಲದೆ ಮೂರು ವಾರಗಳೊಳಗೆ 2447.19 ಕೋಟಿ ರೂ.ಗಳನ್ನು ಬಿಡುಗಡೆಬೇಕೆಂದು ನ್ಯಾಯಾಲಯ ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News