ಪಾಕ್: ಅಪಹೃತ ಸಿಖ್ ಬಾಲಕಿ ಮನೆಗೆ ವಾಪಸ್

Update: 2019-09-06 17:10 GMT

ಕರಾಚಿ, ಸೆ. 6: ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಅಪಹರಣಕ್ಕೊಳಗಾಗಿದ್ದಾರೆನ್ನಲಾದ ಸಿಖ್ ಬಾಲಕಿಯೊಬ್ಬರು ಮನೆಗೆ ಮರಳಿದ್ದಾರೆ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ.

ರೋಹ್ರಿ ನಿವಾಸಿ ರೆನೊ ಕುಮಾರಿ ಆಗಸ್ಟ್ 29ರಂದು ಕಾಲೇಜಿಗೆ ಹೋಗುತ್ತಿದ್ದಾಗ ಮುಸ್ಲಿಮ್ ವ್ಯಕ್ತಿಯೊಬ್ಬ ಅಪಹರಿಸಿದ್ದಾನೆ ಎಂದು ಆಕೆಯ ಹೆತ್ತವರು ಆರೋಪಿಸಿದ್ದಾರೆ.

ಬಾಲಕಿಯನ್ನು ಅಪಹರಿಸಿ ಬಲವಂತವಾಗಿ ಇಸ್ಲಾಮ್‌ಗೆ ಮತಾಂತರಿಸಲಾಗಿದೆ ಹಾಗೂ ಮುಸ್ಲಿಮ್ ವ್ಯಕ್ತಿಯೊಬ್ಬನೊಂದಿಗೆ ಮದುವೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಪಂಜಾಬ್ ಗವರ್ನರ್ ಮತ್ತು ಸಿಖ್ ಸಮುದಾಯದ 30 ಸದಸ್ಯರ ತಂಡದ ನಡುವೆ ಹಲವು ದಿನಗಳ ಕಾಲ ಮಾತುಕತೆ ನಡೆದ ಬಳಿಕ ಬಾಲಕಿ ಮನೆಗೆ ಮರಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಘೋಟ್ಕಿಯಲ್ಲಿ 12 ಮಂದಿಯನ್ನು ಬಂಧಿಸಿದ್ದಾರೆ ಎಂದು ಪತ್ರಿಕೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News