ಮುಹಮ್ಮದ್ ಫರಾಝ್ ಅಲಿಗೆ ಕ್ರೀಡಾಭಾರತಿ ಪ್ರಶಸ್ತಿ
Update: 2019-09-06 23:25 IST
ಮಂಗಳೂರು, ಸೆ.6: ಸ್ಕೇಟಿಂಗ್ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಹಲವು ಪ್ರಶಸ್ತಿ ಪಡೆದ ಬಾಲ ಪ್ರತಿಭೆ ಸ್ಕೇಟಿಂಗ್ ಕ್ರೀಡಾಪಟು ಮುಹಮ್ಮದ್ ಫರಾಝ್ ಅಲಿ ಅವರಿಗೆ ಕ್ರೀಡಾ ಭಾರತಿ ಸಂಘನಿಕೇತನ ಮಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಕೊಡಮಾಡುವ ಕ್ರೀಡಾ ಭಾರತಿ ಪ್ರತಿಭಾ ಪುರಸ್ಕಾರ 2018-19 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇವರು ಮಂಗಳೂರಿನ ಪ್ರೆಸಿಡೆನ್ಸಿ ಶಾಲೆಯ 4ನೇ ತರಗತಿ ವಿದ್ಯಾರ್ಥಿ. ಫಾರೂಕ್ ಹಾಗೂ ಝರೀನ ದಂಪತಿಯ ಪುತ್ರ.