×
Ad

ಆಯುಷ್ಮಾನ್ ಭಾರತ್- ಆರೋಗ್ಯ ಕಾರ್ಡ್‌ಗೆ ಸೂಚನೆ

Update: 2019-09-07 18:38 IST

ಉಡುಪಿ, ಸೆ. 7: ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಗೆ ಸಂಬಂಧಿಸಿದಂತೆ ಆರೋಗ್ಯ ಕಾರ್ಡ್‌ಗಳನ್ನು ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ, ತಾಲೂಕು ಆಸ್ಪತ್ರೆ ಕುಂದಾಪುರ ಹಾಗೂ ಕಾರ್ಕಳ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಾದ ಹೆಬ್ರಿ, ನಿಟ್ಟೆ, ಬ್ರಹ್ಮಾವರ, ಕೋಟ, ಶಿರ್ವ, ಬೈಂದೂರುಗಳಲ್ಲಿ ಮಾತ್ರವಲ್ಲದೇ ಕರ್ನಾಟಕ ಒನ್ ಸೆಂಟರ್ ಹಾಗೂ ಜಿಲ್ಲೆಯಲ್ಲಿರುವ ಸೇವಾ ಸೆಂಟರ್‌ಗಳಲ್ಲಿ ಪಡೆಯಬಹುದು.

ಮಾತ್ರವಲ್ಲದೇ ಈ ಮೇಲಿನ ಕೇಂದ್ರಗಳು ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆದು ಇತರ ಸ್ಥಳಗಳಲ್ಲಿ ಶಿಬಿರಗಳನ್ನು ನಡೆಸಿ ಸಂಬಂಧಪಟ್ಟ ಕಾರ್ಡ್‌ಗಳನ್ನು ಸಾರ್ವಜನಿಕರಿಗೆ ತರಿಸಲು ಕ್ರಮ ಕೈಗೊಳ್ಳಬಹುದು. ಪೇಪರ್‌ನ ಕಾರ್ಡ್‌ಗೆ 10 ರೂ. ಹಾಗೂ ಪ್ಲಾಸ್ಟಿಕ್ ಕಾರ್ಡ್ ನೀಡುವು ದಾದರೆ ಕಾರ್ಡ್ ಒಂದಕ್ಕೆ ಕೇವಲ 35 ರೂ. ಮಾತ್ರ ಫಲಾನುಭವಿಗಳಿಂದ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News