×
Ad

ವಿದ್ಯಾರ್ಥಿಗಳು ದೇಶದ ಭವಿಷ್ಯದ ಬೆನ್ನೆಲುಬು: ವಿನಯ ಗುರೂಜಿ

Update: 2019-09-07 20:10 IST

ಉಡುಪಿ, ಸೆ.7: ವಿದ್ಯಾರ್ಥಿಗಳು ಈ ದೇಶದ ಭವಿಷ್ಯದ ಬೆನ್ನೆಲುಬು ಆಗಿ ದ್ದಾರೆ. ವಿದ್ಯಾರ್ಥಿ ಶಕ್ತಿಗಿಂದ ದೊಡ್ಡ ಶಕ್ತಿ ಬೇರೊಂದಿಲ್ಲ. ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಮಾತ್ರವಲ್ಲದೆ ದೇಶದ ಬಗ್ಗೆಯೂ ಚಿಂತನೆ ಮಾಡಬೇಕು ಎಂದು ಶೃಂಗೇರಿ ಗೌರಿಗದ್ದೆಯ ಸ್ವರ್ಣ ಪೀಠಿಕ ಪುರ ದತ್ತಾಶ್ರಮದ ವಿನಯ ಗುರೂಜಿ ಹೇಳಿದ್ದಾರೆ.

ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಉಡುಪಿ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪ್ರಸ್ತುತ ಸಾಲಿನ ಪದಾಧಿ ಕಾರಿಗಳ ಆಯ್ಕೆ ಹಾಗೂ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಶಿಕ್ಷಣದಲ್ಲಿ ಹಣ ಸಂಪಾದಿಸುವುದು ಹೇಗೆ ಎಂಬುದು ಕಲಿತರೆ ಸಾಲದು. ಅದನ್ನು ಹೇಗೆ ವಿನಿಯೋಗಿಸಬೇಕೆಂಬ ಅರಿವು ಕೂಡ ಯುವಜನತೆಗೆ ನೀಡ ಬೇಕು. ಹಬ್ಬ ಸೇರಿದಂತೆ ವಿವಿಧ ಆಚರಣೆಗಳ ಜೊತೆ ಗಿಡ ನೆಡುವ ಕಾರ್ಯ ಕ್ರಮಗಳನ್ನು ಕೂಡ ಹಮ್ಮಿಕೊಳ್ಳಬೇಕು ಎಂದರು.

ಶುಲ್ಕ ಪಾವತಿಸಲು ಸಾಧ್ಯವಾಗದ ಬಡ ಸಹಪಾಠಿಗೆ ನೆರವು ಒದಗಿಸುವ ಮನೋಧರ್ಮವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಶುದ್ಧ ನೀರು ಉಳಿಸುವ ನಿಟ್ಟಿನಲ್ಲಿ ದೇಶದ ಜೀವನಾಡಿಯಾಗಿರುವ ನದಿಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಶ್ಯಾಮಲಾ ಕುಂದರ್, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಸ್ಥಾಪಕ ದಿನಕರ ಶೆಟ್ಟಿ, ರಾಜ್ಯಾಧ್ಯಕ್ಷ ಅಶ್ವಥ್ ಕೊಠಾರಿ, ಬಿಜೆಪಿ ಮುಖಂಡ ಬೇಲೂರು ರಾಘವೇಂದ್ರ ಶೆಟ್ಟಿ, ಸಮಾಜ ಸೇವಕ ರಮೇಶ್ ಕಲ್ಲೋಟೆ ಮಾತನಾಡಿದರು.

ವೇದಿಕೆಯಲ್ಲಿ ಉದ್ಯಮಿಗಳಾದ ಗಣೇಶ್ ಸಾಲಿಯಾನ್, ಹರೀಶ್ ಶೆಟ್ಟಿ, ಪ್ರಶಾಂತ್ ಸುವರ್ಣ, ಪ್ರಮುಖರಾದ ಹರೀಶ್ ತೋಳಾರ್, ಸುಭಾಶ್ ಪೂಜಾರಿ, ಸತೀಶ್ ಸಾಲಿಯಾನ್ ವೊದಲಾದವರು ಉಪಸ್ಥಿತರಿದ್ದರು.

ಸಂಘದ ಗೌರವ ಸಲಹೆಗಾರ ವಿವೇಕ ಜಿ.ಸುವರ್ಣ ಸ್ವಾಗತಿಸಿದರು. ಸಂಚಾ ಲಕ ರಾಮಾಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜೇತ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು. ಬಳಿಕ ಸಭಾಂಗಣದಿಂದ ಎಂಜಿಎಂ ಕಾಲೇಜಿನವರೆಗೆ ವಿದ್ಯಾರ್ಥಿಗಳ ವಿಜಯೋತ್ಸವದ ಮೆರವಣಿಗೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News