×
Ad

ಕಲ್ಲಡ್ಕ: ವಿದ್ಯಾರ್ಥಿ, ಪೋಷಕರಿಗೆ ಎಸ್.ಎಂ.ಎಸ್ ಮೂಲಕ ಮಾಹಿತಿ ಕಾರ್ಯಕ್ಕೆ ಚಾಲನೆ

Update: 2019-09-07 20:16 IST

ವಿಟ್ಲ : ಶತಮಾನೋತ್ಸವದ ಹೊಸ್ತಿಲಲ್ಲಿರುವ ಕಲ್ಲಡ್ಕದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಗಳಿಗೆ ಮತ್ತು ಪೋಷಕರಿಗೆ ಅಗತ್ಯ ಮತ್ತು ತುರ್ತು ಮಾಹಿತಿಗಳನ್ನು ಎಸ್.ಎಂ.ಎಸ್ ಮೂಲಕ ಏಕಕಾಲದಲ್ಲಿ ರವಾನಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಶತಮಾನೋತ್ಸವ ಬೆಳ್ಳಿಹಬ್ಬ ಸಮಿತಿಯ ಉಪಾಧ್ಯಕ್ಷ ಶಿವಶಂಕರ್ ಅವರು ಇದರ ಪ್ರಾಯೋಜಕತ್ವವನ್ನು ವಹಿಸಿ ಉದ್ಘಾಟಿಸಿದರು.

ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ  ರಾಜೇಶ್ ಕೊಟ್ಟಾರಿ ಶತಮಾನೋತ್ಸವ ಬೆಳ್ಳಿಹಬ್ಬ ಸಮಿತಿಯ ಉಪಾಧ್ಯಕ್ಷ ಅಬೂಬಕ್ಕರ್ ಮುರಬೈಲು, ಸಂಘಟನಾ ಕಾರ್ಯದರ್ಶಿ   ಸಲೀಂ, ಸಮಿತಿಯ ಸದಸ್ಯರು ಎಸ್ಡಿಎಂಸಿ ಸದಸ್ಯರು, ಹಾಗೂ  ಶಾಲಾ ಸಹ ಶಿಕ್ಷಕರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ಅಶ್ರಫ್ ಸ್ವಾಗತಿಸಿ,  ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News