ಉಡುಪಿ ಜಿಪಂ ಸಿಇಒ ಆಗಿ ಪ್ರೀತಿ ಗೆಹ್ಲೋಟ್ ಅಧಿಕಾರ ಸ್ವೀಕಾರ
Update: 2019-09-07 20:48 IST
ಉಡುಪಿ, ಸೆ.7: ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯಾಗಿ ಪ್ರೀತಿ ಗೆಹ್ಲೋಟ್ ಶನಿವಾರ ಅಧಿಕಾರ ಸ್ವೀಕರಿಸಿದರು. ಇವರು ಈ ಹಿಂದೆ ಉತ್ತರ ಕನ್ನಡ ಜಿಲ್ಲೆ ಕುಮಟಾದಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದರು.
ಉಡುಪಿ ಜಿಪಂ ಸಿಇಒ ಆಗಿದ್ದ ಸಿಂಧೂ ಬಿ ರೂಪೇಶ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸರಕಾರ ವರ್ಗಾವಣೆಗೊಳಿಸಿದೆ.
ರಾಜಸ್ತಾನ ಮೂಲದ 2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಪ್ರೀತ್ ಗೆಹ್ಲೋಟ್, ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ. ಐಐಟಿಯಿಂದ ಬಿ.ಟೆಕ್ ಪದವೀಧರೆಯಾಗಿರುವ ಇವರು ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 598ನೇ ರ್ಯಾಂಕ್ ಪಡೆದಿದ್ದರು.