×
Ad

ಉಡುಪಿ: ಬಿಎಲ್‌ಓ ಆ್ಯಪ್ ತರಬೇತಿ ಕಾರ್ಯಾಗಾರ

Update: 2019-09-07 20:54 IST

ಉಡುಪಿ, ಸೆ.7: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ, ಎಲೆಕ್ಟೋ ವೆರಿಫಿಕೇಷನ್ ಕಾರ್ಯಕ್ರಮ ಹಾಗೂ ಬಿಎಲ್‌ಓ ಆ್ಯಪ್ ಅನುಷ್ಠಾನಗೊಳಿಸುವ ಕುರಿತಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅಧ್ಯಕ್ಷತೆ ಯಲ್ಲಿ ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಶನಿವಾರ ಒಂದು ದಿನದ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರದಲ್ಲಿ ಕುಂದಾಪುರ ಉಪ ವಿಬಾಗಾಧಿಕಾರಿ ಹಾಗೂ ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳಿಗೆ ಮತ್ತು ತಾಲೂಕು ಮಾಸ್ಟರ್ ಟ್ರೈನಿಗಳಿಗೆ ತರಬೇತಿ ನೀಡಲಾಯಿತು.

ಕಾರ್ಯಾಗಾರದಲ್ಲಿ ಕುಂದಾಪುರ ಉಪ ವಿಬಾಗಾಧಿಕಾರಿ ಹಾಗೂ ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳಿಗೆ ಮತ್ತು ತಾಲೂಕು ಮಾಸ್ಟರ್ ಟ್ರೈನಿಗಳಿಗೆ ತರಬೇತಿ ನೀಡಲಾಯಿತು. ಆ್ಯಪ್ ಬಳಕೆ ಕುರಿತು ರಾಜ್ಯಮಟ್ಟದಲ್ಲಿ ತರಬೇತಿ ಪಡೆದ ಡಾ.ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸೋಜನ್ ಕೆ ಜಾರ್ಜ್ ಆ್ಯಪ್ ಬಳಸುವ ಕುರಿತಂತೆ ವಿವರವಾದ ತರಬೇತಿಯನ್ನು ನೀಡಿದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News