×
Ad

ಬಜ್ಪೆ: ಕುಂದು-ಕೊರತೆ ಸಭೆಯಲ್ಲಿ ರಿವಾಲ್ವರ್ ತೋರಿಸಿ ಜೀವ ಬೆದರಿಕೆ !

Update: 2019-09-07 21:39 IST

ಮಂಗಳೂರು, ಸೆ.7: ಬಜ್ಪೆ ಪಡುಪೆರಾರ ಗ್ರಾಮದ ಎಜುಕೇಶನ್ ಟ್ರಸ್ಟ್‌ನ ಕುಂದು-ಕೊರತೆ ಸಭೆಯಲ್ಲಿ ವ್ಯಕ್ತಿಯೊಬ್ಬ ರಿವಾಲ್ವರ್ ತೋರಿಸಿ ಜೀವಬೆದರಿಕೆ ಹಾಕಿದ್ದಾನೆ ಎನ್ನಲಾದ ಘಟನೆ ಇತ್ತೀಚೆಗೆ ನಡೆದಿದೆ.

ದೀಪಕ್ ಕೋಟ್ಯಾನ್ (47) ಪ್ರಕರಣದ ಆರೋಪಿಯಾಗಿದ್ದು, ಈತನಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಆ. 22ರಂದು ಮಧ್ಯಾಹ್ನ 12 ಗಂಟೆಗೆ ಎಜುಕೇಶನ್ ಟ್ರಸ್ಟ್‌ನಲ್ಲಿ ಸಭೆ ನಡೆಯುತ್ತಿತ್ತು. ಈ ಸಂದರ್ಭ ಕಾಲೇಜು ಪ್ರಾಂಶುಪಾಲರು, ಪ್ರಾಧ್ಯಾಪಕರ ಸಮಕ್ಷಮದಲ್ಲಿ ಟ್ರಸ್ಟ್‌ನ ಅಧ್ಯಕ್ಷರು ಮತ್ತು ಇತರರ ಜತೆ ಹಾಜರಿದ್ದ ದೀಪಕ್ ಕೋಟ್ಯಾನ್ ಮೀಟಿಂಗ್‌ನಲ್ಲಿ ಎದ್ದು ನಿಂತು ‘ಸಂಸ್ಥೆಯು ಸರಿಯಾಗಿ ನಡೆಯಬೇಕಿದ್ದರೆ ನಾವು ಹೇಳಿದಂತೆ ಕೇಳಬೇಕು, ಇಲ್ಲದಿದ್ದರೆ ನಿಮಗೆ ಏನು ಮಾಡಬೇಕೆಂದು ನನಗೆ ಗೊತ್ತಿದೆ’ ಎಂದು ರಿವಾಲ್ವರ್ ತೋರಿಸಿ ಬೆದರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬಜ್ಪೆ ಠಾಣೆಗೆ ಪ್ರಿನ್ಸಿಪಾಲ್ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News