ಮಂಗಳೂರು: ಮಟ್ಕಾ ಆಡುತ್ತಿದ್ದ ನಾಲ್ವರ ಬಂಧನ
ಮಂಗಳೂರು, ಸೆ. 7: ನಗರದ ಪಂಜಿಮೊಗರು ಸಮೀಪ ಮಟ್ಕಾ ಜೂಜಾಟ ಆಡುತ್ತಿದ್ದ ನಾಲ್ವರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಸೋಮೇಶ್ವರ ಕುಂಪಳ ನಿವಾಸಿ ಗೌತಮ (29), ಕೋಟೆಕಾರು ಕುಂಪಳದ ರಘುಚಂದ್ರ (29), ಪಂಜಿಮೊಗರು ನಿವಾಸಿ ರವಿ ಅರುಣಾಚಲಂ (52), ಬಿಜೈ ಕಾಪಿಕಾಡ್ ನಿವಾಸಿ ರಕ್ಷಿತ್ ಜೆ. ರಾವ್ (30) ಬಂಧಿತ ಆರೋಪಿಗಳು.
ಘಟನೆ ವಿವರ: ಶುಕ್ರವಾರ ಸಂಜೆ 4 ಗಂಟೆಗೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ಪಂಜಿಮೊಗರು ಸಮೀಪದಲ್ಲಿ ಆರೋಪಿಗಳು ಆಟೊರಿಕ್ಷಾ ನಿಲ್ಲಿಸಿಕೊಂಡು ಸಾರ್ವಜನಿಕರನ್ನು ನಂಬಿಸಿ ಅವರಿಂದ ಹಣ ಪಡೆದು ಚೀಟಿಯಲ್ಲಿ ಅಂಕಿಗಳನ್ನು ಬರೆದು ಅದೃಷ್ಟದ ಮಟ್ಕಾ ಆಡುತ್ತಿದ್ದರು. ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದರು.
ಬಂಧಿತ ಆರೋಪಿಗಳಿಂದ 74,260 ರೂ. ನಗದು, ಅಂಕಿ ಬರೆಯಲು ಉಪಯೋಗಿಸಿದ ಹಾಳೆ, ಪೆನ್, 50 ಸಾವಿರ ಮೌಲ್ಯದ ಆಟೊರಿಕ್ಷಾ ಹಾಗೂ ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ವಾಧೀನಪಡಿಸಿಕೊಳ್ಳಲಾದ ಸೊತ್ತುಗಳ ವೌಲ್ಯ 1.28 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಕುರಿತು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಕಾವೂರು ಠಾಣಾ ಪೊಲೀಸ್ ನಿರೀಕ್ಷಕ ರಾಘವ ಎಸ್.ಪಡೀಲ್, ಪಿಎಸ್ಸೈ ಹರೀಶ್ ಹಾಗೂ ರೋಸಮ್ಮ ಹಾಗೂ ಸಿಬ್ಬಂದಿ ವಿಶ್ವನಾಥ, ರಾಜಶೇಖರ, ದುರ್ಗಾಪ್ರಸಾದ್ ಶೆಟ್ಟಿ, ರಶೀದ್ ಶೇಖ್, ವಿನಯಕುಮಾರ್ ಎಚ್.ಕೆ., ಸಿಖಂದರ್, ಇಬ್ರಾಹೀಂ ಭಾಗವಹಿಸಿದ್ದರು.